ಹುಣಸೂರು: ಇನೊವಾ ಕಾರಿನಲ್ಲಿ ಜಿಂಕೆ ಮಾಂಸ ಸಾಗಿಸುತ್ತಿರುವುದು ನಾಗರಹೊಳೆ ಉದ್ಯಾನದಂಚಿನಲ್ಲಿ ಅಕ್ಕಮಾಳ ರಸ್ತೆಯಲ್ಲಿ ಪತ್ತೆಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ಕಾಡು ತೂಸುಗಳು, ಟಾಚ್೯, 1 ಮೊಬೈಲ್ ಪತ್ತೆಯಾಗಿದೆ. ನಾಗರಹೊಳೆ ಬಫರ್ ಜೋನ್ ನಲ್ಲಿ ಫೆ.26 ರಂದು ಮುಂಜಾನೆ ಸಿಬ್ಬಂದಿಗಳು ಗಸ್ತಿನಲ್ಲಿದ್ದ ವೇಳೆ ಮಾವುಕಲ್ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಸಿಂಗನೂರು ಗಸ್ತಿನ ದೇವಮಚ್ಚಿ ಅಂಗನವಾಡಿ ಕಡೆ ಇನೋವಾ ಕಾರು ಗಸ್ತು ಸಿಬ್ಬಂದಿಗಳನ್ನು ಕಂಡು ವೇಗವಾಗಿ ಹೋಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಿಂಬಾಲಿಸಿದ ವೇಳೆ ಕಾರಿನ ಟಯರ್ ಪಂಚರ್ ಆಗಿದ್ದರಿಂದ ಕಾರನ್ನು ಬಿಟ್ಟು ಆರೋಪಿಗಳು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ತಪಾಸಣೆ ನಡೆಸಿದ ವೇಳೆ ಲೆದರ್ ಬ್ಯಾಗ್, ಪ್ಲಾಸ್ಟಿಕ್ ಕವರ್, ಸುಮಾರು 6 ಕೆ.ಜಿಯಷ್ಟು ಜಿಂಕೆ ಮಾಂಸ, ಟಾಚ್೯, 1 ರಿಯಲ್ ಮೀ ಮೊಬೈಲ್, ವಿವಿಧ ಕಂಪನಿಯ 9 ಕಾಡತೂಸುಗಳು ಪತ್ತೆಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು ಸಹಿತ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ನಾಗರಹೊಳೆ ಉದ್ಯಾನದ ನಿರ್ದೆಶಕಿ ಪಿ.ಎ.ಸೀಮಾ ಉದಯವಾಣಿಗೆ ತಿಳಿಸಿದ್ದಾರೆ. ಎಸಿಎಪ್ ಲಕ್ಷ್ಮಿಂಕಾತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೆ ಚೌಕೂರು ವಲಯದ ಆರ್ ಎಫ್ ಒ ಡಿ.ದೇವರಾಜ್ ನೇತೃತ್ವದಲ್ಲಿ ಡಿ.ಆರ್.ಎಫ್.ಒ. ಚನ್ನವೀರೇಶ ಗಾಣಗೇರ, ತಿತಿಮತಿ ಕ ಎಸ್.ಟಿ.ಪಿ.ಎಫ್.ನ ಕಾರ್ತಿಕ್, ಸಿಬ್ಬಂದಿಗಳಾದ ಸಿದ್ದಪ್ಪಾಜಿ, ಹನುಮಂತಪ್ಪ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

