Breaking News

ಯುವತಿಯ ನಗ್ನ ಫೋಟೋ ಸ್ಟೇಟಸ್‌ಗಿಟ್ಟ ನರ್ಸಿಂಗ್ ವಿದ್ಯಾರ್ಥಿ.!

ಹುಬ್ಬಳ್ಳಿ: ವಿದ್ಯಾರ್ಥಿಯೋರ್ವ ಯುವತಿಯ ನಗ್ನ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ಗೆ ಇಟ್ಟಿದ್ದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ಕೃತ್ಯ ಎಸಗಿದ ವಿದ್ಯಾರ್ಥಿ. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶುಭಂ ಅದೇ ಕಾಲೇಜಿನ ಜೂನಿಯರ್ ವಿದ್ಯಾರ್ಥಿನಿ (20 ವರ್ಷದ ಯುವತಿಯ) ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸಾಪ್ ನಂಬರ್‌ ಪಡೆದಿದ್ದ. ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ.

ಯುವತಿಯ ನಗ್ನ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ. ನ. 11ರಂದು ಆಕೆಯ ನಗ್ನ ವಿಡಿಯೋದ ಸ್ಕ್ರೀನ್ ಶಾರ್ಟ್ ತೆಗೆದು, ಆ ಫೋಟೋವನ್ನು ಎಡಿಟ್ ಮಾಡಿ ಸ್ಟೇಟಸ್‌ಗೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಈ ಸಂಬಂಧ ಆರೋಪಿ ಶುಭಂ ಮಧುಕರ ಕೂಲೆ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

Featured Video Play Icon

ಸಂಸ್ಕೃತಿ ಇಲಾಖೆಯ ಸಚಿವರಿಗೆ ಸಂಸ್ಕೃತಿಯೇ ಇಲ್ಲ: ರಾಜ್ಯ ಸರ್ಕಾರದ ಭವಿಷ್ಯ ನುಡಿದ ಟೆಂಗಿನಕಾಯಿ..!

ಹುಬ್ಬಳ್ಳಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಸರಿಯಾದ ರೀತಿಯಲ್ಲಿ ಮಾತನಾಡಬೇಕು. ಆಕಾಶಕ್ಕೆ ಉಗುಳಿದರೇ …

Leave a Reply

Your email address will not be published. Required fields are marked *

You cannot copy content of this page