Breaking News

ಮೈಸೂರಲ್ಲಿ ಬ್ರೇಕ್​ ಬದಲು ಎಕ್ಸಲೇಟರ್​ ಒತ್ತಿದ್ದಕ್ಕೆ ಮಹಿಳೆ ಮೇಲೆ ಹರಿದ ಕಾರು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೈಸೂರು: ಚಾಲಕನ‌ ಅಚಾತುರ್ಯದಿಂದ ಕಾರೊಂದು ಫುಟ್​ಪಾತ್​ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದಿದೆ (Car hits on a woman). ಈ ವೇಳೆ ಮಹಿಳೆ ಗಾಯಗೊಂಡ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಮೈಸೂರಿನ ದೇವರಾಜ ಅರಸು ರಸ್ತೆಯ ಯಶಸ್ವಿನಿ ಸಿಲ್ಕ್ ಮಳಿಗೆ ಮುಂಭಾಗದ ಪಾರ್ಕಿಂಗ್​ನಿಂದ ಹೊರಟಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಫುಟ್​ಪಾತ್​ ಮೇಲೆ ನುಗ್ಗಿದೆ. ಈ ವೇಳೆ ಎದುರಿಗಿದ್ದ ಭಾಗ್ಯ ಮತ್ತು ಲಕ್ಷ್ಮೀ ಎಂಬುವರಿಗೆ ಕಾರು ಗುದ್ದುತ್ತಿದ್ದಾಗ ಎಚ್ಚೆತ್ತಕೊಂಡ ಅವರು ದೂರು ಸರಿದಿದ್ದಾರೆ.

ಆದರೂ ಭಾಗ್ಯ ಅವರ ಕಾಲ ಮೇಲೆ ಕಾರು ಹರಿದಿದೆ. ಈ ಘಟನೆ ನ.13 ರಂದು ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಚಾಲಕ ಶ್ರೀರಾಂಪುರ ನಿವಾಸಿ ಆರೋಗ್ಯ ರಾಜ್ ಎಂಬುವರ ವಿರುದ್ಧ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾರನ್ನು ಪಾರ್ಕ್ ಮಾಡುವ ವೇಳೆ ಬ್ರೇಕ್ ಬದಲು ಅಚಾನಕ್ಕಾಗಿ ಎಕ್ಸಲೇಟರ್ ಒತ್ತಿದ್ದರಿಂದ ಕಾರು ಫುಟ್​ಪಾತ್​ಗೆ ನುಗ್ಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ

Share News

About admin

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *