Breaking News

ಕೋಲಾರ ಗಡಿಯಲ್ಲಿ ಪ್ರಮೋದ ಮುತಾಲಿಕ್‌ ಬಂಧನ 

ಕೋಲಾರ :ನಿಷೇಧದ ನಡುವೆಯೂ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಂಧನ ಮಾಡಲಾಗಿದೆ. ಕಳೆದ ಶನಿವಾರ ರಾತ್ರಿ ದತ್ತಪೀಠಕ್ಕೆ ತೆರಳುತ್ತಿದ್ದ ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಕೋಲಾರ ಬಂದ್ ಕರೆ ನೀಡಿದ್ದರು, ಬಂದ್ ಹಿನ್ನಲೆ ಕೋಲಾರಕ್ಕೆ ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆಸಿ ನಗರದಲ್ಲಿ ಭಾಷಣ ಮಾಡಿಸಲು ಉದ್ದೇಶಿಸಲಾಗಿತ್ತು. ಆದರೆ ಜಿಲ್ಲಾಡಳಿತ ಮುತಾಲಿಕ್ ಆಗಮನವನ್ನು ನಿಷೇಧ ಹೇರಿ ಕೋಮುಗಲಭೆಗೆ ಅವಕಾಶ ಕಲ್ಪಿಸದಂತೆ ಎಚ್ಚರವಹಿಸಿತ್ತು‌. ಆದರೂ ಜಿಲ್ಲೆಗೆ ಆಗಮಿಸಲು ಬಂದ ಪ್ರಮೋದ್ ಮುತಾಲಿಕ್ ರನ್ನು ಗಡಿಯಲ್ಲೇ ಬಂಧಿಸಲಾಗಿದೆ.

ಕೋಲಾರ ತಾಲ್ಲೂಕಿನ ರಾಮಸಾಗರ ಗಡಿಯಲ್ಲಿ ಮುತಾಲಿಕ್ ವಾಹನಕ್ಕೆ ಅಡ್ಡಿಪಡಿಸಿ ಬೆಂಗಳೂರು ಗ್ರಾಮಾಂತರ ನಂದಗುಡಿ ಪೊಲೀಸ್ ಠಾಣೆಯ ಪೊಲೀಸರು ಮುತಾಲಿಕ್ ರನ್ನ ಬಂಧಿಸಲಾಗಿದೆ. ಈ ಸಂಧರ್ಭದಲ್ಲಿ ಮಾತನಾಡಿದ ಮುತಾಲಿಕ್ ಪೊಲೀಸರ ಕಾರ್ಯಕ್ಷಮೆಯಿಂದ ಹಿಂದುಗಳ ರಕ್ಷಣೆ ಆಗಿದೆ‌. ಇಲ್ಲವಾದಲ್ಲಿ ಅಂದೇ ಹಿಂದುಗಳಿದ್ದ ವಾಹನವನ್ನು ಕಿಡಿಗೇಡಿಗಳು ಸುಟ್ಟು ಹಾಕುತ್ತಿದ್ದರು. 47 ಅಮಾಯಕರ ರಕ್ಷಣೆ ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರ ಯಾವುದೇ ರೀತಿಯ ಸರಿಯಾದ ಕ್ರಮ ಜರುಗಿಸಿಲ್ಲ. ಹಿಂದೂ ಸಮಾಜದ ಮೇಲೆ ದೌರ್ಜನ್ಯ ನಿಲ್ಲಬೇಕು. ಈ ಬಗ್ಗೆ ಪ್ರತಿಭಟನೆ ಮಾಡಬಾರದು ಎಂದರೆ ತಪ್ಪು, ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಡೋದು ಬಿಟ್ಟು ನಮ್ಮನ್ನು ಜಿಲ್ಲೆಗೆ ಬಾರದಂತೆ ತಡೆಯಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *