ಅಕಾಲಿಕ ಮಳೆಯಿಂದ ಬೆಳೆ ನಾಶ: ರಾಯಚೂರಿನಲ್ಲಿ ರೈತ ಆತ್ಮಹತ್ಯೆ

ಮೃತ ವೀರನಗೌಡ ಮಾಲಿಪಾಟೀಲ್

ರಾಯಚೂರು: ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ನೊಂದು ರೈತ ನೇಣು‌ ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಲಿಂಗಸೂಗೂರು ತಾಲೂಕಿನ ಬೋಗಾಪುರ ಗ್ರಾಮದ ವೀರನಗೌಡ ಮಾಲಿಪಾಟೀಲ್ (55) ಮೃತ ರೈತ. ಈತ 8 ಎಕರೆ ಜಮೀನು ಹೊಂದಿದ್ದು ಭತ್ತ ಬೆಳೆದಿದ್ದ. ಫಸಲು ಇನ್ನು ಸ್ವಲ್ಪದಿನಗಳ ಕಳೆದರೆ ಕೈಗೆ ಬರುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಪೈರು ನೆಲಕಚ್ಚಿತು. ಇದರಿಂದ ಆಘಾತವಾಗಿ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೀರನಗೌಡ ಅವರು ಬ್ಯಾಂಕ್ ಹಾಗೂ ಖಾಸಗಿಯಾಗಿ ಸಾಲ ಮಾಡಿದ್ದರು ಎಂಬ ಮಾಹಿತಿ ಇದೆ

Share News

About admin

Check Also

ಎಸ್ ಎಂ ಕೃಷ್ಣಗೆ ನಾಚಿಗೆಯಾಗಬೇಕು : ಹಿರೇಮಠ ಆರೋಪ

ರಾಯಚೂರು : ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ಮಧ್ಯೆ ನಂಟಿದೆ. ಅತೀ ಭ್ರಷ್ಟ ವ್ಯಕ್ತಿ ಅಂದ್ರೆ ಅದು ಮಾಜಿ ಸಿಎಂ …

Leave a Reply

Your email address will not be published. Required fields are marked *

You cannot copy content of this page