ಧಾರವಾಡ: ಶಿಕ್ಷಕರ OPS ಹಣ ಬಿಡುಗಡೆ ಮಾಡುವುದು, ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೆ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಶಿಕ್ಷಕರ ಭಾರತ ಯಾತ್ರೆ ಉತ್ತರ ಪ್ರದೇಶ ತಲುಪಿದೆ.
ವಿವಿಧ ರಾಜ್ಯಗಳಲ್ಲಿ ಯಾಲಿ ಹಾಗೂ ಸಮಾವೇಶಗಳನ್ನು ನಡೆಸಿದ ನಂತರ ಇದೀಗ ಯಾತ್ರೆಯು ಉತ್ತರ ಪ್ರದೇಶಕ್ಕೆ ಬಂದು ತಲುಪಿದೆ.ಮಧ್ಯಪ್ರದೇಶದ ರೇವಾದಲ್ಲಿ ನಿನ್ನೆ ಬೃಹತ್ ಸಮಾವೇಶ ನಡೆಸಿದ ನಂತರ ಉತ್ತರ ಪ್ರದೇಶಕ್ಕೆ ಯಾತ್ರೆ ಸಾಗಿತು. ಪ್ರಯಾಗಕ್ಕೆ ಬಂದು ತಲುಪಿದ ನಂತರ ಅಲ್ಲಿನ ಶಿಕ್ಷಕ ಸಂಘದವರು ಬಸವರಾಜ ಗುರಿಕಾರ ಮತ್ತು ಅನೇಕರಿಗೆ ಅದ್ಧೂರಿ ಸ್ವಾಗತ ಕೋರಿದರು.
ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರಾಜ್ಯದಲ್ಲೇ ನಿಂತು ಮಾತನಾಡಿದ ಬಸವರಾಜ ಗುರಿಕಾರ, ಕೇಂದ್ರದ ಬಿಜೆಪಿ ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಶಿಕ್ಷಕರ OPS ಹಣವನ್ನು ಬಾಕಿ ಇರಿಸಿಕೊಂಡು ಸತಾಯಿಸುತ್ತಿದೆ. ಉಪಯೋಗವಲ್ಲದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಹೊರೆ ಮಾಡುತ್ತಿದೆ. ಶಿಕ್ಷಕರಿಗೆ ಅನುಕೂಲಕರವಾಗಿದ್ದ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಶಿಕ್ಷಕ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಗುಡುಗಿದರು.
ಹರಿಗೋವಿಂದನ್, ಸೀಮಾ ಮಾತುರ್, ರಮಾದೇವಿ, ಸಂಜಯ ಮಿಶ್ರಾ, ಅರ್ಜುನ್ ಸಿಂಗ್, ಅಖಿಲೇಶ್ ದ್ವಿವೇದಿ, ಮನೋಜಕುಮಾರ, ನಾಗರಾಜ ಇದ್ದರು.ನಂತರ ಯಾತ್ರೆಯು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ದಿ.ರಾಮಪಾಲ್ ಸಿಂಗ್ ಜೀಯರ್ ಅವರ ಮನೆಗೆ ತೆರಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿತು. ಅಲ್ಲಿಂದ ಯಾತ್ರೆ ಮುಂದೆ ಓರಿಯಾ ಪ್ರದೇಶಕ್ಕೆ ತಲುಪಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





