
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಕಣದಿಂದ ಕಾಂಗ್ರೆಸ್ನ ಮತ್ತೋರ್ವ ಸದಸ್ಯ ಹಿಂದೆ ಸರಿದಿದ್ದಾರೆ. ಪ್ರಸ್ತುತ ಮೈಸೂರು-ಚಾಮರಾಜನಗರದಿಂದ ಕಾಂಗ್ರೆಸ್ ಎಂಎಲ್ಸಿಯಾಗಿದ್ದ ಆರ್.ಧರ್ಮಸೇನ ಈ ಬಾರಿ ಸ್ಪರ್ಧಿಸದಿರಲು ತೀರ್ಮಾನ ಕೈಗೊಂಡಿದ್ದಾರೆ.
ಇವರ ಬದಲಿಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ.ಡಿ.ತಿಮ್ಮಯ್ಯ ತಾವೇ ಈ ಬಾರಿ ಪರಿಷತ್ ಚುನಾವಣೆಯ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಇದುವರೆಗೂ 25 ಕ್ಷೇತ್ರಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ.

ತಿಮ್ಮಯ್ಯ ಅವರು ಇಂದು ಬೆಂಗಳೂರಿಗೆ ಆಗಮಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಟಿಕೆಟ್ ನನಗೆ ಅನ್ನೋದು ಕನ್ಫರ್ಮ್ ಆಗ್ತಿದೆ. ಹಾಗಾಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೆ. ಕೊನೆಯ ಹಂತ ಮಾತ್ರ ಬಾಕಿಯಿದೆ. ನನಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಎಲ್ಲ ಹಿರಿಯ ನಾಯಕರಿಗೆ ನಾನು ಚಿರ ಋಣಿ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

