Breaking News

ಕನಕದಾಸರ ಭಾವಚಿತ್ರಕ್ಕೆ ಅವಮಾನ-ಒಂದು ಪೋಟೋ ಗತಿಯಿಲ್ಲ ಈ ಗ್ರಾಮ ಪಂಚಾಯ್ತಿಲಿ..?

ಧಾರವಾಡ :ದಾಸ ಶ್ರೇಷ್ಠ ಕನಕದಾಸರ ಜಯಂತಿಯ ದಿನದಂದು ಕನಕದಾಸರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನೆಡೆದಿದೆ. ನಾಡಿಗೆ ತಮ್ಮ ಕಿರ್ತನೆ,ಮೂಲಕ ಮತ್ತು 15 ಮತ್ತು 16 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ತಪ್ಪಾಗಲಾರದು.

ಇಂದು ಕನಕದಾಸ ಜಯಂತಿ ಪ್ರತಿವರ್ಷವೂ ಕೂಡ ಕನಕ ಜಯಂತಿಯನ್ನು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಿಸಬೇಕು ಮತ್ತು ಅವರ ಭಾವಚಿತ್ರವನ್ನು ಕಚೇರಿ ಒಳಗಡೆ ಇರಿಸಬೇಕೆಂದು ಸರ್ಕಾರ ಸೂಚನೆ ನೀಡಿದ್ದರೂ ಸಹಿತ ಇಂದು ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಪಂಚಾಯತಿಯಲ್ಲಿ ಕನಕದಾಸರ ಫೋಟೋವನ್ನು ಝರಾಕ್ಸ್‌ ಮಾಡಿರುವ ಪ್ರತಿಯನ್ನು ಇಟ್ಟು ಆಚರಿಸಲಾಗಿದ್ದು,ಇದು ಅತ್ಯಂತ ವಿಷಾದಕರ ಸಂಗತಿ, ಸರ್ಕಾರ ಗ್ರಾಂ ಪಂ ಅಭಿವೃದ್ದಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತೇ ಆದರೆ ಈ ಪಂಚಾಯತಿಯಲ್ಲಿ ಒಂದು ಪೋಟೋ ಕೂಡ ಗತಿಯಿಲ್ಲದಿರುವುದು ವಿಪರ್ಯಾಸವೇ ಸರಿ.ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನೆಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *