ಕೋಲಾರ: ಆಪರೇಷನ್ ಕಮಲದ ಬಗ್ಗೆ ಸಿಎಂ ಕುಮಾರಸ್ವಾಮಿ ಜಾಗ್ರತೆ ವಹಿಸಲಿಲ್ಲ ಎಂದುಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಆಪರೇಷನ್ ಕಮಲದ ಬಗ್ಗೆ ಹೇಳಿದ್ದರೂ ಕುಮಾರಸ್ವಾಮಿ ಗಮನಕೊಡಲಿಲ್ಲ.ಬಿಜೆಪಿ ಕುತಂತ್ರದ ಬಗ್ಗೆ ಎಚ್ಚರಿಕೆ ತೆಗೆದುಕೊಂಡಿದ್ರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.-ಬಿಜೆಪಿ ಮುಖಂಡರು ಐದು ಕೋಟಿ ರುಪಾಯಿ ಕೊಟ್ಟಿದ್ದ ಬಗ್ಗೆ ಕುಮಾರಸ್ವಾಮಿಗೆ ಮೊದಲೆ ತಿಳಿಸಿದ್ದೆ.ಎಲ್ಲರಲ್ಲೂ ವಿಶ್ವಾಸವಿಟ್ಟಿದ್ದ ಕುಮಾರಸ್ವಾಮಿ ನಡವಳಿಕೆ ಈ ಪರಿಸ್ಥಿತಿಗೆ ತಂದಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





