Breaking News

ತ್ಯಾಜ್ಯ ವಿಲೇವಾರಿಗೆ ಪುತ್ತೂರಿನ ಗ್ರಾ.ಪಂಚಾಯತಿಯಿಂದ ವಿನೂತನ ಪ್ರಯೋಗ

ಪುತ್ತೂರು: ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲೇ ಸರಿ. ಕಸ ವಿಲೇವಾರಿಗೆ ಮಹಾನಗರ ಪಾಲಿಕೆಗಳೇ ಪರದಾಡುತ್ತಿರಬೇಕಾದರೆ, ಸ್ಥಳೀಯಾಡಳಿತಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಇದಲ್ಲದೇ, ತ್ಯಾಜ್ಯ ಸುರಿಯಲು ಸ್ಥಳದ ಸಮಸ್ಯೆ, ಇದರೊಂದಿಗೆ ಸುತ್ತಲಿನ ಜನರ ವಿರೋಧ.

ಮನೆಗಳಲ್ಲಿನ ಕಸವನ್ನು ಸಂಗ್ರಹಿಸಬಹುದು, ಅದನ್ನು ವಿಲೇವಾರಿ ಮಾಡುವುದು ಹೇಗೆ? ಎಂಬ ಸಮಸ್ಯೆಗೆ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕೂರು ಗ್ರಾಮ ಪಂಚಾಯಿತಿಯ ವಿನೂತನ ಪ್ರಯೋಗ ಯಶಸ್ಸು ಕಂಡಿದೆ.

ಹೌದು, ಮನೆಗಳ ತ್ಯಾಜ್ಯವನ್ನು ಸಂಗ್ರಹಿಸಿ ಎಲ್ಲೆಂದರಲ್ಲಿ ಬಿಸಾಡುವ ಬದಲು ಒಂದು ತೆಂಗಿನ ತೋಟವನ್ನೇ ಆರಂಭಿಸಿ, ಅದಕ್ಕೆ ಮೇಲುಗೊಬ್ಬರವಾಗಿ ತ್ಯಾಜ್ಯವನ್ನೇ ಉಣಬಡಿಸಲಾಗುತ್ತಿದೆ. ಈ ಮೂಲಕ ತ್ಯಾಜ್ಯ ವಿಲೇವಾರಿಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಆಲಂಕೂರಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು.

250 ತೆಂಗಿನ ಮರಗಳಿಗೆ ತ್ಯಾಜ್ಯ ಗೊಬ್ಬರ

ಗ್ರಾಮಗಳಲ್ಲಿ ಸಂಗ್ರಹಿಸಿದ ಒಣ ಹಾಗೂ ಹಸಿ ಕಸವನ್ನು ವಿಂಗಡಿಸಿ, ಭೂಮಿಯಲ್ಲಿ ಕರಗುವ ಕಸವನ್ನೆಲ್ಲಾ ತೆಂಗಿನ ಗಿಡಗಳ ಬುಡಗಳಿಗೆ ಹಾಕಲಾಗುತ್ತಿದೆ. ಸರ್ಕಾರದ ವಿವಿಧ ಅನುದಾನ ಬಳಸಿಕೊಂಡು 2 ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ಹಾಗೂ 250ಕ್ಕೂ ಅಧಿಕ ತೆಂಗಿನ ಸಸಿಗಳ ತೋಟವನ್ನು ಮಾಡಲಾಗಿದೆ. 2 ವರ್ಷಗಳಲ್ಲೇ ಎಲ್ಲಾ ತೆಂಗಿನ ಗಿಡಗಳು ಉತ್ತಮ ಬೆಳವಣಿಗೆಯನ್ನು ಕಂಡಿದೆ. ಕಸ ನಿರ್ವಹಣೆಯ ಜೊತೆಗೆ ಮುಂದಿನ 2 ವರ್ಷಗಳ ಬಳಿಕ ಈ ತೆಂಗಿನ ಸಸಿಗಳಿಂದ ಗ್ರಾಮಪಂಚಾಯತ್​ಗೆ ಆದಾಯವೂ ಬರುವ ನಿರೀಕ್ಷೆ ಹೊಂದಲಾಗಿದೆ.

Share News

About admin

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *