Breaking News

ಮಳೆಗೆ ಮನೆಯೂ ಹೋಯ್ತು,ಬೆಳೆಯೂ ಹೋಯ್ತು


ಧಾರವಾಡ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆ ರೈತರನ್ನು ಅಕ್ಷರಶಃ ನಿದ್ದೆಗೆಡಿಸಿದೆ. ಒಂದೆಡೆ ಪೀಕುಗಳು ಮಳೆಗೆ ಹಾನಿಗೀಡಾದರೆ, ಮತ್ತೊಂದೆಡೆ ಮನೆಗಳು ನೆಲಕ್ಕುರುಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ.

ಧಾರವಾಡ ಜಿಲ್ಲೆಯಾದ್ಯಂತ ಅನೇಕ ಮನೆಗಳು ನೆಲಕ್ಕುರುಳಿದ್ದು, ಮನೆ ಕಳೆದುಕೊಂಡವರೆಲ್ಲ ಇದೀಗ ಸರ್ಕಾರದ ಮುಂದೆ ಕೈಚಾಚಬೇಕಾಗಿದೆ.ಧಾರವಾಡ ತಾಲೂಕಿನ ಮನಸೂರು, ಉಪ್ಪಿನ ಬೆಟಗೇರಿ, ಅಮ್ಮಿನಬಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳು ನೆಲಕಚ್ಚಿವೆ.ಮೂರ್ನಾಲ್ಕು ದಿನ ಬಿಟ್ಟೂ ಬಿಡದೇ ಸುರಿದ ಮಳೆ ಬೆಳೆಗಳಿಗೆ ಮಾತ್ರ ನಷ್ಟವನ್ನುಂಟು ಮಾಡಿಲ್ಲ. ಬಡಜನತೆಯ ಪುಟ್ಟ ಗುಡಿಸಲುಗಳನ್ನೂ ಸಹ ಕಿತ್ತುಕೊಂಡಿದ್ದು, ಸರ್ಕಾರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ

Share News

About admin

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *