ಬೆಂಗಳೂರು : ನೈಋತ್ಯ ಮಾರುತಗಳು ಬೀದರ್ ಜಿಲ್ಲೆಯ ತಲುಪಿದ್ದು, ಇಡೀ ರಾಜ್ಯವನ್ನು ಆವರಿಸಿದಂತಾಗಿದೆ. ಮೇ 31ಕ್ಕೆ ರಾಜ್ಯದ ಕರಾವಳಿಗೆ ಕಾಲಿಟ್ಟಿದ್ದ ಮುಂಗಾರು ಮಾರುತಗಳು ಸುಮಾರು ಎರಡು ವಾರದ ಬಳಿಕ ರಾಜ್ಯವನ್ನು ಆವರಿಸಿದೆ.
ಮೇ ತಿಂಗಳ ಕೊನೆಯಲ್ಲಿ ರಾಜ್ಯ ಕರಾವಳಿ ತಲುಪಿದ್ದ ಮುಂಗಾರು ಮಾರತುಗಳು ಆ ಬಳಿಕ ತನ್ನ ಬಿರುಸು ಕಳೆದುಕೊಂಡಿತ್ತು. ಮುಂಗಾರು ಋುತುವಿನ ಆರಂಭದಲ್ಲಿ ಭರ್ಜರಿ ಮಳೆಯಾಗುವ ಕರಾವಳಿ (ಶೇ. 65) ಮತ್ತು ಮಲೆನಾಡಿನಲ್ಲಿ (ಶೇ. 61) ಮಳೆಯ ತೀವ್ರ ಕೊರತೆ ಕಾಡಿದೆ. ಜೂನ್ 16ಕ್ಕೆ ಮುಂಗಾರು ಮಾರುತ ಪೂರ್ಣವಾಗಿ ರಾಜ್ಯವನ್ನು ಆವರಿಸಿದ್ದರೂ ದಕ್ಷಿಣ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದ 17 ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.32 ಮಳೆಯ ಕೊರತೆಯಾಗಿದೆ. ಆದರೆ ಮುಂದಿನ ಮೂರ್ನಾಲ್ಕು ದಿನದಲ್ಲಿ ಮುಂಗಾರು ಚುರುಕಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಶನಿವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





