Breaking News

ಚಿಂತಾಮಣಿ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆಯಲ್ಲಿ ಚಿನ್ನ, ಅಪಾರ ಆಸ್ತಿ ದಾಖಲೆ ಪತ್ತೆ

ಚಿಕ್ಕಬಳ್ಳಾಪುರ : ಬೆಳ್ಳಂಬೆಳ್ಳಗೆ ರಾಜ್ಯದೆಲ್ಲೆಡೆ ಎಸಿಬಿ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಜಿಲ್ಲೆಯ ಚಿಂತಾಮಣಿಯ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಎಂಬುವರ ಮನೆ ಮೇಲೆ ದಾಳಿ‌ ನಡೆಸಲಾಗಿದೆ.

ಇಂದು ಡಿವೈಎಸ್ಪಿ ಸುಧೀರ್​ ,ಇನ್ಸ್‌ಪೆಕ್ಟರ್ ರವಿ ನೇತೃತ್ವದ ತಂಡ ಅಧಿಕಾರಿಯ ಮನೆಗೆ ದಾಳಿ ನಡೆಸಿ ಅನೇಕ ಗಂಟೆಗಳ ಕಾಲ ತಪಾಸಣೆ ನಡೆಸಿದೆ. ಈ ವೇಳೆ ಬೆಂಗಳೂರಿನಲ್ಲಿ ಎರಡು‌ ಸೈಟ್​​ನಲ್ಲಿ ‌5 ಮನೆಗಳ ನಿರ್ಮಾಣ, ಚಿಂತಾಮಣಿಯಲ್ಲಿ ಮೂರು ಮನೆ, 4 ಸೈಟ್​​​​ಗಳ ದಾಖಲೆಗಳು, ಒಂದು ಪೆಟ್ರೋಲ್ ಬಂಕ್ ಮಾಲೀಕತ್ವದ ದಾಖಲೆ ‌ಸೇರಿ ಮನೆಯಲ್ಲಿ 4 ಲಕ್ಷ ಹಣ, 300 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಪ್ರಯತ್ನಿಸಿದ್ದ ಕೃಷ್ಣಾರೆಡ್ಡಿ, ಸದ್ಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *