ಚಿತ್ರದುರ್ಗ: ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಾಯಿಯೊಬ್ಬಳು ಮಗುವಿಗೆ ವಿಷವುಣಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ತುಮಕೂರು ನಗರದ ಲೋಕೇಶ್ ಎಂಬ ವ್ಯಕ್ತಿಯು ತನ್ನ ಪತ್ನಿಯಾದ ವನಿತಗೆ ಭಾರೀ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಪತ್ನಿಯ ಸಂಬಂಧಿಗಳಿಂದ ಕೇಳಿಬಂದಿದೆ. ನಿರಂತರವಾಗಿ ಪತಿಯ ಅವಾಚ್ಯ ಮಾತುಗಳು ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದ ವನಿತ ತನ್ನ ಮಗ ಚಾರ್ವಿತ್(4)ಗೆ ವಿಷವುಣಿಸಿದ ಬಳಿಕ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ವನಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

