ಕಲ್ಲು ಕ್ವಾರೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲೂಕಿನ ಸೋಮಗುದ್ದು ಸಮೀಪದ ಕ್ವಾರೆಯಲ್ಲಿ ನಡೆದಿದೆ.ಸೋಮುಗುದ್ದು ಹಾಗೂ ಅರಣ್ಯ ಪ್ರದೇಶದ ಮಧ್ಯ ಇರುವ ಕಲ್ಲಿನ ಕ್ವಾರೆಯ ನೀರಿನಲ್ಲಿ ಈಜಲು ಹೋಗಿದ್ದ ಸೋಮುಗುದ್ದ ಗ್ರಾಮದ 22 ವರ್ಷದ ನವೀನ್ ಮೃತ ದುರ್ದೈವಿಯಾಗಿದ್ದಾನೆ.
ತನ್ನ ತಂದೆಯ ಜೊತೆಗೆ ನವೀನ್ ಕ್ವಾರೆಗೆ ತೆರಳಿದ್ದ. ತಂದೆ ಬಂಡೆ ಒಡೆಯುವ ಕೆಲಸದಲ್ಲಿ ತೊಡಗಿದಂತಹ ಸಮಯದಲ್ಲಿ ನವೀನ್ ಈಜಲು ಹೋಗಿ ನವೀನ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ. ನವೀನ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ 112 ಹೊಯ್ಸಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ಮುಳುಗಿದ್ದ ಶವವನ್ನು ಅಗ್ನಿಶಾಮಕ ದಳ ಸಹಕಾರದಿಂದ ಹೊರ ತೆಗೆದಿದ್ದಾರೆ..
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

