Breaking News

ಚಿತ್ರದುರ್ಗ

ಕಾರು ಡಿಕ್ಕಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸ್ತಿದ್ದ ವ್ಯಕ್ತಿ ಸೇರಿ ಮೂವರು ಸಾವು!!

ಚಿತ್ರದುರ್ಗ ತಾಲೂಕಿನ ಕಾತ್ರಾಳ ಗ್ರಾಮದ ಕೆರೆ ಬಳಿ ಡಿವೈಡರ್​ಗೆ ಇನ್ನೋವಾ ಕಾರು ಡಿಕ್ಕಿಯಾಗಿ ತಮಿಳುನಾಡು ಮೂಲದ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಾರಿನಲ್ಲಿದ್ದ ಅರ್ಜುನ್, ಶರವಣ್ ಮತ್ತು ಸೇಂದಿಲ್ ಮೃತರು.ಘಟನೆ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಯುವತಿಯೋರ್ವಳ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!!

ಆಶಾ ಅವರು ಖಾಸಗಿ ಶಾಲೆಯೊಂದರ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಈಕೆಯಿಂದ ಅನಿಲಾಸನ್‌ ಎಂಬಾತ 50 ಸಾವಿರ ರೂ. ಸಾಲ ಪಡೆದಿದ್ದ. ಆದರೆ ಸಾಲದ ಹಣ ಮರಳಿಸಿದೇ ಸತಾಯಿಸುತ್ತಿದ್ದ. ಹಲವರ ಸಮ್ಮುಖದಲ್ಲಿ ಈ ಜಗಳ ಇತ್ಯರ್ಥಗೊಂಡು ಅನಿಲಾಸನ್‌ ಹಣ ಮರಳಿಸಬೇಕೆಂದು ತಾಕೀತು ಮಾಡಲಾಗಿತ್ತು. ಎರಡು ದಿನದ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್‌ ಕೆಂಗುಂಟೆ ಅರಣ್ಯ ಪ್ರದೇಶದ ಬಳಿ ಬರಲು ಹೇಳಿದ್ದ. ಅಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ. ಪೊಲೀಸರು ಆರೋಪಿಯನ್ನು …

Read More »

ಕುಡಿಯೋ ನೀರಿನಿಂದ ಮುರಿದುಬಿದ್ದ ಮದುವೆ ಬೆಳಗಾಗೋದ್ರಲ್ಲಿ ಮದುವೆ ಬೇಡ ಎಂದ ವಧು.

ಚಿತ್ರದುರ್ಗದ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಯುವತಿ ಮದುವೆ ನಿಶ್ಚಯಾಗಿತ್ತು. ರಾತ್ರಿ ವರನ ಕಡೆಯವರಿಗೆ ವಧು ಕಡೆಯವರು ಕುಡಿಯಲು ನೀರು ಕೊಡದೆಯಿರುವ ವಿಚಾರಕ್ಕೆ ಕಿರಿಕ್ ಆಗಿದ್ಯಂತೆ.ಈ ವಿಚಾರವಾಗಿ ಎರಡು ಕಡೆಯವರ ನಡುವೆ ಜಗಳ ಜೋರಾಗಿ ಮನಸ್ತಾಪ ಏರ್ಪಟ್ಟಿದೆ.ಇದೇ ನೆಪವೊಡ್ಡಿ ಮದುವೆಗೆ ವಧು ನಿರಾಕರರಿಸುವುದಾಗಿ ತಿಳಿದುಬಂದಿದೆ.ಮದುವೆಗೆ ಒಪ್ಪುವಂತೆ ವರನ ಕಡೆಯವರು ಕೇಳಿಕೊಂಡರೂ ಒಪ್ಪಲಿಲ್ಲ. ವರ ಮನೋಜ್‌ಕುಮಾರ್‌ ಮತ್ತು ವಧು ಅನಿತಾ ಬೆಂಗಳೂರಿನ ಖಾಸಗಿ …

Read More »

ರಾತ್ರೋರಾತ್ರಿ ಪುಂಡರಿಂದ ದಾಳಿ ಬೈಕ್ ಕಾರುಗಳು ಜಕಮ್.

ಕಳೆದ ರಾತ್ರಿ ಚಿತ್ರದುರ್ಗದ ಗ್ರಾಮ ಒಂದರಲ್ಲಿ ಏಕಾಏಕಿ ಕೆಲವು ಪುಂಡರು ಕೇರಿಯ ಮೇಲೆ ದಾಳಿ ಮಾಡಿದ್ದಾರೆ. ಒಟ್ಟು ಒಂಬತ್ತು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಕಾರು ಬೈಕುಗಳನ್ನು ಜಕಂ ಮಾಡಿದ್ದಾರೆ. ಪೊಲೀಸರು ಇದರ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಯತ್ನದಲ್ಲಿದ್ದಾರೆ.

Read More »

ಹುಬ್ಬಳ್ಳಿಯಲ್ಲಿ ಶಾದಿ ಮಹಲನಲ್ಲಿ ಜಷಣೆ ಆಜಾದಿ ಕಾರ್ಯಕ್ರಮ

ನವಲಗುಂದ: ಉಮ್ಮತಿ ಎಜೋಕೇಶನ್ ಆಂಡ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪಟ್ಟಣದ ಶಾದಿ ಮಹಲದಲ್ಲಿ ಜಷಣೆ ಆಜಾದಿ ಎಂಬ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉರ್ದು ಸಾಹಿತಿ ಹಾಗೂ ಶಾಯರ್ ಅಝೀಜುಲ್ಲಾ ಸರ್ಮಸ್ತ ಅವರು ಸ್ವಾತಂತ್ರೋತ್ಸವ ಸಂದ್ರರ್ಭದಲ್ಲಿ ಹೋರಾಡಿ ವೀರ ಮರಣರಾದವರ ಬಗ್ಗೆ ಇತಿಹಾಸ ವಿವರಿಸದರು. ಇದೆ ವೇಳೆ ಉತ್ತಮ ಸಾಧನೆ ಮಾಡಿ ಎಂಬಿಬಿಎಸ್ ಓದುತ್ತಿರುವ ಒಂದೇ ಮನೆಯ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Read More »

ಇಂದು ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ : ಸಿಎಂ ಉದ್ಘಾಟನೆ

ಚಿತ್ರದುರ್ಗ : ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಡಿ. 18 ಇಂದು ಮಧ್ಯಾಹ್ನ 01 ಗಂಟೆಗೆ ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಇದಕ್ಕಾಗಿ ಮೈದಾನದಲ್ಲಿ ಪೆಂಡಾಲ್, ವೇದಿಕೆ ನಿರ್ಮಾಣ ಸೇರಿದಂತೆ ಬಹುತೇಕ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ …

Read More »

ಮುರುಘಾ ಮಠಕ್ಕೆ ನೂತನ ಪೀಠಾಧಿಪತಿ ಕುರಿತು ಗದ್ದಲ

ಚಿತ್ರದುರ್ಗ: ಡಾ.ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ನೂತನ ಪೀಠಾಧಿಪತಿ ನೇಮಕ ಕುರಿತು ಮಠದಲ್ಲಿ ಗದ್ದಲಗಳು ಏರ್ಪಟ್ಟಿದೆ ಎಂದು ತಿಳಿದುಬಂದಿದೆ. ನೂತನ ಪೀಠಾಧಿಪತಿ ನೇಮಕ ಸಂಬಂಧ ನಿನ್ನೆ ವೀರಶೈವ-ಲಿಂಗಾಯತ ಸಮಾಜದ ಸದಸ್ಯರೊಂದಿಗೆ ಸಭೆ ನಡೆಯಿತು. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ಸ್ಮಾರಕದಲ್ಲಿ ಮಾಜಿ ಸಚಿವ ಎಚ್.ಏಕಾಂತಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗದ್ದಲಗಳು ಏರ್ಪಟ್ಟಿದ್ದು ಕಂಡು ಬಂದಿತ್ತು. ಆಡಳಿತಾಧಿಕಾರಿ ನೇಮಕ …

Read More »

ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್‌ನ ಮೊದಲ ಹಂತದ ಪಟ್ಟಿ ಬಿಡುಗಡೆ : ನಿಖಿಲ್ ಕುಮಾರಸ್ವಾಮಿ

ಚಿತ್ರದುರ್ಗ: ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್‌ನ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಂದೇ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೊಂದಲವಿರುವ ಜೆಡಿಎಸ್ ಅಭ್ಯರ್ಥಿ ಯಾರು ಎಂದು ಘೋಷಿಸುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಚಿತ್ರದುರ್ಗದಲ್ಲಿ ಹೇಳಿದರು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬುರಡುಕಂಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 19ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಹಿರಿಯೂರು ಟಿಕೆಟ್ ವಿಚಾರದಲ್ಲಿ …

Read More »

ಮುರುಘಾ ಶರಣರ ವಿರುದ್ಧ ಸುಳ್ಳು ಆರೋಪ : ಬಸವರಾಜೇಂದ್ರ ಪೋಲಿಸ್ ರ ವಶಕ್ಕೆ

ಚಿತ್ರದುರ್ಗ : ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಬಾಲಕಿಯೊಬ್ಬಳ ಮೇಲೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಸವರಾಜೇಂದ್ರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಸವರಾಜೇಂದ್ರ ಮಠದಲ್ಲೇ ಶಿಕ್ಷಕನೆಂದು ಹೇಳಲಾಗುತ್ತಿದ್ದು, ಮಠದ ಹಾಸ್ಟೆಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಶ್ರೀಗಳ ವಿರುದ್ಧ ಸುಳ್ಳು ದೂರು ನೀಡುವಂತೆ ಬಗೆ ಬಗೆಯಲ್ಲಿ ಪ್ರಚೋದನೆ ನೀಡುತ್ತಿರುವ ಆಡಿಯೊವೊಂದು ಈಗ ವೈರಲ್‌ ಆಗಿದೆ. …

Read More »

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ಕುರಿತು ವರದಿ ಬಂದ ನಂತರ ನಿರ್ಧರಿಸಲಾಗುವುದು : ಸಿಎಂ

ಚಿತ್ರದುರ್ಗ: ”ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು ಅರ್ಜಿ ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜಿಲ್ಲೆಯ ಸಾಣೇಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ”ಆಡಳಿತಾಧಿಕಾರಿ ನೇಮಿಸುವ ಪೂರ್ವ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯಬೇಕಿದೆ. ಈ ಸಂಬಂಧ ಕಂದಾಯ ಇಲಾಖೆಯಿಂದ ವರದಿ ಸಲ್ಲಿಕೆಯಾದ ಬಳಿಕೆ ನೇಮಕ ಕುರಿತು ತೀರ್ಮಾನಿಸಲಾಗುವುದು” …

Read More »