ಹೆಚ್ಚಿನ ಬಾಡಿಗೆ ನೀಡುವ ಆಮಿಷವೊಡ್ಡಿ ಜನರಿಂದ ಬಾಡಿಗೆಗೆಂದು ಕಾರು ಪಡೆದು ಅಕ್ರಮವಾಗಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸರು ಒಟ್ಟು 44 ವಾಹನಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ವಾಹನಗಳನ್ನು ನಗರದ ಡಿ.ಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ.ಶೋಭಾರಣಿ ವಿ.ಜೆ ಅವರು ವಾರಸುದಾರರಿಗೆ ಸೋಮವಾರ ಹಸ್ತಾಂತರ ಮಾಡಿದರು.
ಪ್ರಮುಖ ಆರೋಪಿ ಜಾಹಿದ್ ಪಾಷಾನಿಗೆ ಕಾರುಗಳನ್ನು ಬಾಡಿಗೆಗೆ ನೀಡಿ ಮೋಸ ಹೋಗಿರುವುದಾಗಿ ನಗರದ ಬ್ರೂಸ್‌ಪೇಟೆ, ಗಾಂಧಿನಗರ ಸೇರಿದಂತೆ ನಾಲ್ಕು ಠಾಣೆಗಳಲ್ಲಿ ಹಲವರಿಂದ ದೂರುಗಳು ಬಂದಿದ್ದವು. ಒಟ್ಟು 103 ಕಾರುಗಳನ್ನು ಜಾಹಿದ್ ಪಾಷ ಹಲವರಿಂದ ಬಾಡಿಗೆಗೆಂದು ಪಡೆದು, ಅವುಗಳನ್ನು ರಾಯಚೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಾರಾಟ ಮಾಡಿದ್ದ. ಕೆಲವು ವಾಹನಗಳನ್ನು ಗಿರವಿ ಇಟ್ಟಿದ್ದ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

