Breaking News

ನಾವು ಬದುಕಬೇಕೋ ಬೇಡ್ವೋ ? ಸಾಯಿ ಅಂದರೆ ಸತ್ತಿ ಬಿಡ್ತೀವಿ- ಪೋಲಿಸರ ಎದುರೇ ಯುವಕನ ಹುಚ್ಚಾಟ

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಗಲಾಟೆ ಮಾಡಿದವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಮನು ಅಲಿಯಾಸ್ ಮನ್ಮಥ ಕೊರವರ ಎಂಬಾತನೂ ಆ ಗಲಾಟೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ಆತನನ್ನೂ ಕರೆತಂದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಈ ವಿಚಾರಣೆಯಿಂದ ಮನು ತನ್ನ ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಅಸಮಾಧಾನ ಹೊರಹಾಕಿದ್ದಾನೆ.

ನಾನು ಆ ಘಟನೆಯಲ್ಲಿ ಭಾಗಿ ಆಗೇ ಇಲ್ಲ. ಯಾರೋ ನನ್ನ ಹೆಸರು ಹೇಳಿದ್ದಾರೆಂದು ಪೊಲೀಸರು ನನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ನಾವು ಬದುಕಬೇಕೋ ಬೇಡವೋ? ಸಾಯಿ ಎಂದರೆ ಸತ್ತುಬಿಡುತ್ತೇವೆ. ಈ ರೀತಿ ಕಿರುಕುಳ ಕೊಡಬೇಡಿ ಎಂದು ಮನು ಅಳಲು ತೋಡಿಕೊಂಡಿದ್ದಾನೆ

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *