ಧಾರವಾಡದ : ಲೈನ್ ಬಜಾರ್ ಹನುಮಂತದೇವರ ದೇವಸ್ಥಾನದ ಹಿಂಭಾಗದಲ್ಲಿ ಇರುವಂತಹ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಘಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಧಾರವಾಡದ ಶಹರ ಪೊಲೀಸರು ಬಾವಿಯೊಳಗೆ ಇದ್ದಂತಹ ಅಪರಿಚಿತ ವ್ಯಕ್ತಿಯ ಮೃತದೇಹ ವನ್ನು ಹೊರತೆಗೆದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಪೋಸ್ಟ್ ಮಾಟಂಗಾಗಿ ಕಳುಹಿಸಿದ್ದಾರೆ.ಇನ್ನು ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸರು ಘಟನೆಯ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದು ವ್ಯಕ್ತಿಯ ಗುರುತು ಹಾಗೂ ಯಾವ ಕಾರಣಕ್ಕಾಗಿ ಬಾವಿಯೊಳಗೆ ಬಿತ್ತಿದ್ದಾರೆ ಎಂಬುದು ಇನ್ನು ತಿಳಿದಿಲ್ಲ.
ಪೊಲೀಸರ ತನಿಖೆಯಿಂದ ವ್ಯಕ್ತಿ ಯಾರು..? ಯಾವ ಕಾರಣಕ್ಕಾಗಿ ಮೃತದೇಹ ಬಾಯೊಳಗೆ ಸಿಕ್ಕಿದೆ ಎಂಬುದರ ಕುರಿತು ಮಾಹಿತಿ ದೊರೆಯಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

