Breaking News

ದಾಖಲೆ ಬಳಸಿ ಹಣ ವಂಚನೆ : ಆನ್​ಲೈನ್​ನಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ!

ಹುಬ್ಬಳ್ಳಿ : ಆನ್‌ಲೈನ್‌ನಲ್ಲಿ 22 ಸಾವಿರ ರೂ. ಪಡೆದಿದ್ದ ಮಹಿಳೆಯ ದಾಖಲೆಗಳನ್ನು ಬಳಸಿಕೊಂಡು ವಿವಿಧ ಆ್ಯಪ್‌ಗಳ ಮೂಲಕ ಅವರ ಹೆಸರಲ್ಲಿ 1,78,425 ರೂ. ಸಾಲ ಪಡೆದು ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್​ಲೈನ್​ ಲೋನ್​ ಆ್ಯಪ್​​ ವಂಚನೆ : ಹಳೇ ಹುಬ್ಬಳ್ಳಿಯ ಪ್ರೀತಿ ಎಂಬುವರು ನ.21 ರಿಂದ ಡಿ. 5ರ ನಡುವೆ ಆ್ಯಪ್ ಒಂದರ ಮೂಲಕ 22,000 ರೂ . ಸಾಲ ಪಡೆದಿದ್ದರು.ಈ ವೇಳೆ ನೀಡಿದ್ದ ಆಧಾರ್, ಪಾನ್ ಕಾರ್ಡ್, ಮತ್ತಿತರ ದಾಖಲೆ ಬಳಸಿಕೊಂಡು ಯಾರೋ ವಿವಿಧ ಆ್ಯಪ್‌ಗಳ ಮೂಲಕ 1.78 ಲಕ್ಷ ರೂ . ಸಾಲ ಪಡೆದಿದ್ದಾರೆ. ಈ ಸಾಲ ಮರುಪಾವತಿಸಿ ಎಂದು ಕೆಲವರು ನಿರಂತರವಾಗಿ ಕರೆ ಮಾಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ

Share News

About admin

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *