ಬೆಂಗಳೂರು : ನಗರದ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ ಓದುತ್ತಿರುವ ಕನ್ನಡದ ಕುವರಿ ಅಮನ ಜೆ.ಕುಮಾರ್ ಅವ್ರು 337 ಕವನಗಳನ್ನ ಬರೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದು, ಭಾರತದ ಅತ್ಯಂತ ಕಿರಿಯ ಕವಯಿತ್ರಿ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಕರ್ನಾಟಕದಿಂದ ಪ್ರತಿಷ್ಠಿತ ನೋಬಲ್ ಬುಕ್‌ನ ವಿಶ್ವ ದಾಖಲೆಯಲ್ಲಿ Most Prolific Peot ಎಂದು ದಾಖಲಿಸಿಕೊಂಡ ಅಮನ, ಏಪ್ರಿಲ್ 4,2020 ರಿಂದ 29 ನವೆಂಬರ್ 2021ರವರೆಗೆ ಒಟ್ಟು 337 ಕವನಗಳನ್ನ ಬರೆದಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿವೆ. ಇನ್ನೀವು 10070 ಸಾಲುಗಳನ್ನ ಹೊಂದಿವೆ.
ಇನ್ನೀವ್ರ ಈ ಸಾಧನೆಗೆ ಇತ್ತೀಚಿಗಷ್ಟೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ʼನಲ್ಲಿ ʼಭಾರತದ ಅತ್ಯಂತ ಕಿರಿಯ ಕವಯಿತ್ರಿʼ ಎಂದು ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ʼಗ್ರ್ಯಾಂಡ್ ಮಾಸ್ಟರ್ – ಚಿಕ್ಕ ವಯಸ್ಸಿನಲ್ಲಿ ಕವನಗಳನ್ನ ಬರೆಯುತ್ತಾರೆʼ ಎಂದು ದಾಖಲೆ ಮಾಡಿದ್ದಾರೆ.
ಅಂದ್ಹಾಗೆ, ಈ ಪುಟ್ಟ ಕವಯಿತ್ರಿ ಬರೆದ ಕವಿತೆಗಳು ಪ್ರಕೃತಿ, ಕೋವಿಡ್, ಕುಟುಂಬ, ಹಾಸ್ಯ, ದೇವರು, ಸಾಹಿತ್ಯ, ಭಾವನೆ, ಶಾಂತಿ, ಕೃತಜ್ಞತೆ ಸೇರಿ ರಾಷ್ಟ್ರ, ಸಮಾಜ, ಜೀವನ, ಪ್ರೀತಿ, ಮಹಾತ್ವಕಾಂಕ್ಷೆ, ಕನಸು ಮುಂತಾದ ವಿಷಯಗಳನ್ನ ಒಳಗೊಂಡಿವೆ. ಅಂದ್ಹಾಗೆ, ಇದು ನೂತನ ವಿಶ್ವ ದಾಖಲೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

