ಹುಬ್ಬಳ್ಳಿ :ಧಾರವಾಡದಲ್ಲಿ ನೆಡೆದ ಲವ್ ಜಿಹಾದ್ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ಇಂದು ಹಿಂದೂ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಹಿಂದೂ ಯುವತಿಯಾದ ಪ್ರೀಯಾ ಪವಾರ ಎಂಬ ಯುವತಿಯನ್ನು ಹಜೀಮ್ ನದಾಫ್ ಎಂಬ ಮುಸ್ಲಿಂ ಯುವಕನು ಮದುವೆಯಾಗಿ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ.ಜಿಲ್ಲೆಯಲ್ಲಿ ಅನೇಕ ಹಿಂದೂ ಯುವತಿಯರು ಲವ್ ಜಿಹಾದ್ ಮತಾಂತರಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.ಈ ಮತಾಂತರ ಚಟುವಟಿಕೆಯಲ್ಲಿ ಒಂದು ಸಂಘ ಕಾರ್ಯ ಮಾಡುತ್ತಿರುವುದ ನಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಈ ಲವ್ ಜಿಹಾದ್ ಕುರಿತು ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

