Breaking News

ಬುದ್ದಿ ಹೇಳಿದ ಅಣ್ಣ, ಗುಂಡು ಹಾರಿಸಿದ ತಮ್ಮ, ಗಾಯಗೊಂಡ ಸ್ನೇಹಿತ!

ಬೆಂಗಳೂರು : ಮನೆಗೆ ತಡವಾಗಿ ಬಂದ್ದಿಕ್ಕೆ ಅಣ್ಣ ಬುದ್ಧಿವಾದ ಹೇಳಿದ್ದರಿಂದ ಅಸಮಾಧಾನಗೊಂಡ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ ಘಟನೆ ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ಸಲ್ಮಾನ್ ಎಂಬಾತ ಪಿಸ್ತೂಲ್ ನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ರಕ್ಷಿಸುವ ಭರದಲ್ಲಿ ಜೊತೆಗಿದ್ದ ಸ್ನೇಹಿತ ಫಜಲ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ನೇಹಿತ ಫೈಜಲ್ ಜೊತೆ ಮನೆಗೆ ತಡವಾಗಿ ಸಲ್ಮಾನ್ ಬಂದಾ ಅಣ್ಣ ಅಮಿನ್ ದಾದಾ ಬುದ್ಧಿವಾದ ಹೇಳಿದ್ದ. ಇದರಿಂದ ಸಿಡಿಮಿಡಿಗೊಂಡ ತಮ್ಮ ಸಲ್ಮಾನ್ ಕೈಯಲ್ಲಿದ್ದ ಪಿಸ್ತೂಲ್ ನಿಂದ ಮೂರು ಸುತ್ತು ಗುಂಡು ಹಾರಿಸಿಕೊಂಡಿದ್ದಾನೆ. ಪಿಸ್ತೂಲು ಕಸಿದುಕೊಳ್ಳೋ ಭರದಲ್ಲಿ ಸಲ್ಮಾನ್ ನ ಸ್ನೇಹಿತ ಫೈಜಲ್ ನ ಕೈಗೆ ಗುಂಡು ತಗುಲಿದೆ.

ಅಣ್ಣ ಅಮಿನ್‌ ದಾದಾ ಅವರ ಹೆಸರಿನಲ್ಲಿ ಲೈಸೆನ್ಸ್ ಪಿಸ್ತೂಲ್ ಇತ್ತು. ಇದರಿಂದ ಸಲ್ಮಾನ್ ಗುಂಡು ಹಾರಿಸಿದ್ದ. ಸದ್ಯ ಗುಂಡೇಟಿನಿಂದ ಗಾಯಗೊಂಡ ಫೈಜಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆದಿದೆ.

Share News

About admin

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *