Breaking News

ವಾಣಿಜ್ಯ ನಗರಿಯಲ್ಲಿ ಕ್ರಿಸ್ಮಸ್ ಸಡಗರ- ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ ಚರ್ಚ್ ಗಳು


ಹುಬ್ಬಳ್ಳಿ: ಕೋವಿಡ್‌ನಿಂದ ಎರಡು ವರ್ಷ ಕ್ರಿಸ್‌ಮಸ್‌ ಕಳೆಗುಂದಿತ್ತು. ಪ್ರಸ್ತುತ ವರ್ಷ ಸಂಭ್ರಮಕ್ಕೆ ತುಸು ಪೂರಕವಾದ ವಾತಾವರಣವಿದ್ದು, ಕ್ರೈಸ್ತ ಸಮುದಾಯದವರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.


ನಗರದಲ್ಲಿನ ಚರ್ಚ್‌ಗಳೆಲ್ಲ ಬಣ್ಣ, ಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. ಕ್ರಿಸ್‌ಮಸ್ ಟ್ರೀಗಳಿಗೆ ದೀಪ ಅಳವಡಿಸಲಾಗಿದೆ. ಯೇಸುವಿನ ಜನ್ಮ, ಪವಾಡ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿದೆ. ಕ್ರೈಸ್ತರು ಮನೆಗಳ ಎದುರು ಆಕಾಶಬುಟ್ಟಿ ಅಳವಡಿಸಿದ್ದಾರೆ. ಮಕ್ಕಳಿಗೆ ಸಂತಾಕ್ಲಾಸ್ ವೇಷಭೂಷಣ ತೊಡಿಸಿ, ಉಡುಗೊರೆ ನೀಡುವLong ಕಾರ್ಯ
ಕ್ರಮಗಳು ಚರ್ಚ್‌ನಲ್ಲಿ ನಡೆಯುತ್ತಿವೆ.
ಸಾಂಸ್ಕೃತಿಕ ಕಾರ್ಯಕ್ರಮ, ದೃಶ್ಯ ರೂಪಕ, ನಾಟಕಗಳು ಸಹ ನಡೆದವು. ಕೇಕ್, ಕ್ಯಾಲೆಂಡರ್ ವಿತರಣೆ ಮಾಡಲಾಯಿತು. ನಗರದ ವಿವಿಧ ಚರ್ಚ್‌ಗಳಲ್ಲಿ ಯೇಸು ಆರಾಧನೆ ನಡೆಯಲಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *