Breaking News

ಪೆಟ್ರೋಲ್ ₹2, ಡೀಸೆಲ್ ₹1 ರೂಪಾಯಿ ಕಡಿಮೆ ಆಯ್ತಾ.

ದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೆಲ ದಿನಗಳ ಹಿಂದಷ್ಟೇ ಸೆಸ್​ ರೇಟ್​ ಕಡಿಮೆ ಮಾಡಿ ಕೇಂದ್ರ ಸರ್ಕಾರ ಸ್ವಲ್ಪ ಸಮಾಧಾನ ಕೊಟ್ಟಿತ್ತು. ಇದರ ಬೆನ್ನಲ್ಲೆ ಕಳೆದ 8 ಎಂಟು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಬೆಲೆ 2 ರೂಪಾಯಿ ಕಡಿಮೆ ಆಗಿದ್ರೆ, ಡೀಸೆಲ್ 1ರೂಪಾಯಿ ಕಡಿಮೆ ಆಗಿದೆಯಂತೆ.ಈಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.85 ರೂಪಾಯಿಯಾಗಿದ್ರೆ, ಡೀಸೆಲ್ ಬೆಲೆ 74.73ರೂಪಾಯಿ ಆಗಿದೆ. ನಿಖರವಾಗಿ ಹೇಳೋದಾದ್ರೆ 8 ದಿನಗಳಲ್ಲಿ ಪೆಟ್ರೋಲ್ 1.98 ರೂಪಾಯಿ ಕಡಿಮೆ ಆಗಿದ್ರೆ, ಡೀಸೆಲ್ ಬೆಲೆ 0.96 ಪೈಸೆ ಕಡಿಮೆ ಆಗಿದೆ. ಇದಕ್ಕೆ ಕಳೆದೆ 8 ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸಣ್ಣ ಮಟ್ಟಿಗಿನ ಇಳಿತ ಕಂಡುಬಂದಿರೋದೇ ಕಾರಣ ಎನ್ನಲಾಗ್ತಿದೆ. ಪೈಸೆ..ಪೈಸೆ ಕಡಿಮೆಯಾಗ್ತಿರುವ ಪೆಟ್ರೋಲ್​ ರೇಟ್​ ಕಳೆದ 8 ದಿನಗಳಲ್ಲಿ 2 ರೂಪಾಯಿನಷ್ಟು ಕಡಿಮೆಯಾಗಿದೆ ಅಂತಾ ರಿಪೋರ್ಟ್​ ಹೇಳುತ್ತಿದೆ

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *