ಚಿಕ್ಕಮಗಳೂರು: ರಾಜ್ಯ ಸರ್ಕಾರ ನಾಳೆಯಿಂದ ಜಾರಿಗೊಳಿಸುತ್ತಿರುವಂತ ನೈಟ್ ಕರ್ಪ್ಯೂ ಆದೇಶದ ಬಗ್ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರದ ಮಾಲೀಕರು ಸೇರಿದಂತೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರದ ಈ ಆದೇಶ ವಿರುದ್ಧವೇ ಸ್ವಪಕ್ಷೀಯ ನಾಯಕ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಓಮಿಕ್ರಾನ್ ವೈರಸ್ ಬಗ್ಗೆ ಭಯಪಡಬೇಡಿ ಎಂಬುದಾಗಿ ವಿಜ್ಞಾನಿಗಳೇ ತಿಳಿಸಿದ್ದಾರೆ. ಅಲ್ಲದೇ ಮೂಗು ಇರೋರಿಗೆ ನೆಗಡಿ ತಪ್ಪಲ್ಲ ಎಂಬ ಗಾಧೆಯೇ ಇದೆ. ನೆಗಡಿ ಬಂತು ಅಂತ ಆತಂಕ ಪಡೋ ಅವಶ್ಯಕತೆ ಇಲ್ಲ ಎಂದರು.
ರಾಜ್ಯದಲ್ಲಿ ಸದ್ಯ ಜನಜೀವನ ಸಹತ ಸ್ಥಿತಿಯಲ್ಲಿ ಇದ್ದು, ನಾರ್ಮಲ್ ಆಗೇ ನಡೆಯುತ್ತಿದೆ. ನಮ್ಮ ಸರ್ಕಾರದ ಆದೇಶವನ್ನು ಸರಿ-ತಪ್ಪು ಅಂತ ವ್ಯಾಖ್ಯಾನಿಸೋದಕ್ಕೆ ಆಗೋದಿಲ್ಲ. ಸರ್ಕಾರ ಕೂಡ ಜನರನ್ನು ಅನಗತ್ಯ ಭಯಕ್ಕೆ ಒಳಪಡಿಸೋ ಕೆಲಸ ಮಾಡಬಾರದು ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯ ಸರ್ಕಾರದ ನೈಟ್ ಕರ್ಪ್ಯೂ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

