ಹುಬ್ಬಳ್ಳಿ: ಸರಳ ವಾಸ್ತು ಖ್ತಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗುರೂಜಿಯವರ ಮರಣೋತ್ತರ. ಪರೀಕ್ಷೆ ಮುಕ್ತಾಯಗೊಡಿದ್ದು ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಯಿತು. ಇನ್ನೇನು ಕೇಲವೇ ಗಂಟೆಯಲ್ಲಿ ಅಂತ್ಯಕ್ರಿಯೆಗೆ ನಡೆಯಲಿದ್ದು ಇದಕ್ಕೋ ಮುನ್ನ ಒಂದು ಗಂಟೆಗೂ ಅಧಿಕ ಕಾಲ ಸಾರ್ವಜನಿಕ ದರ್ಶನ ಕ್ಕೆ ಸುಳ್ಳ ರಸ್ತೆಯಲ್ಲಿನ ಅವರ ಜಮೀನಿನಲ್ಲಿ ಮಾಡಲಾಗಿದೆ.

ಸುಳ್ಳ ರಸ್ತೆಯ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಸಂಪೂರ್ಣ ಮಾಡಲಾಗಿದ್ದದು ಸ್ಥಳದಲ್ಲಿ ಸರಳ ಜೀವನ ಸಿಬ್ಬಂದಿ ಮಾತ್ರ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಇನ್ನೂ ಇಂದು ಮಧ್ಯಾಹ್ನ 2 ಕ್ಕೆ ನಡೆಯಲಿರುವ ಅಂತ್ಯಕ್ರಿಯೆಗೆ ಸುಳ್ಳ ರಸ್ತೆಯ ಗುರೂಜಿಯವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಗುರುಗಳು ಸಹ ಪರಿಶೀಲನೆ ಮಾಡಿದ್ದಾರೆ. ಸರಳವಾಸ್ತು ಸಂಸ್ಥೆ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಶ್ರೀ ಚಂದ್ರಶೇಖರ ಗುರುಜಿ ಸಂಬಂಧಿಕರು ಸ್ಥಳದಲ್ಲಿಯೇ ಇದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





