ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಬಗ್ಗೆ ಶೀಘ್ರದಲ್ಲಿಯೇ ಸರಕಾರದಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ನಂತರ ಮಾತನಾಡಿದ ಸಚಿವರು, ಅವಳಿನಗರದ ಅಭಿವೃದ್ಧಿಗೆ ತಾವು ಸದಾಕಾಲ ಮುಂದು. ಚುನಾವಣೆಗಳು ಇದ್ದಿದ್ದರಿಂದ ತಡವಾಗಿದೆಯಷ್ಟೇ ಎಂದು ಹೇಳಿದರು.
ಅವಳಿನಗರದ ಅಭಿವೃದ್ಧಿಗೆ ಪೂರಕವಾದ ಎಲ್ಲವನ್ನೂ ಮಾಡಲು ಸಿದ್ಧವಾಗಿದ್ದು, ಸ್ಮಾರ್ಟ್ ಸಿಟಿ ಕೆಲಸಕ್ಕೂ ತೀವ್ರತೆ ಕೊಡಲಾಗುವುದೆಂದು ಮುನೇನಕೊಪ್ಪ ಹೇಳಿದರು.
ಕಸದ ವಿಲೇವಾರಿ ಬಗ್ಗೆ ಒಂದು ಪ್ರದೇಶಕ್ಕೆ ಸಿಮೀತವಾಗಿ ಕೆಲಸ ಮಾಡುವುದಿಲ್ಲ. ಅವಳಿನಗರ ಎಲ್ಲ ಭಾಗದಲ್ಲೂ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಲಾಗುವುದೆಂದು ಸಚಿವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

