Breaking News
Featured Video Play Icon

ಹುಬ್ಬಳ್ಳಿಯಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಇಬ್ಬರು ಕುಖ್ಯಾತ ದರೋಡೆಕೋರ ಮೇಲೆ ಫೈರಿಂಗ್..

ಹುಬ್ಬಳ್ಳಿ ವಾಣಿಜ್ಯ ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಇಬ್ಬರು ಕುಖ್ಯಾತ ದರೋಡೆಕೋರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು, ಬೈಕ್ ಮೇಲೆ ಹೊರಟವರನ್ನು ಸುಲಿಗೆ ಮಾಡುತ್ತಿದ್ದ ಹಾಗೂ ಮನೆ ದರೋಡೆ ಗೂ ಯತ್ನಿಸಿದ್ದ ಗ್ಯಾಂಗ್ ನ ಆರೋಪಿಗಳಾದ ಗುಜರಾತ್ ಮೂಲದ ದಿಲೀಪ್ ಮತ್ತು ನಿಲೇಶ್ ಮೇಲೆ ಫೈರಿಂಗ್ ಮಾಡಲಾಗಿದ್ದು, ಮೂವರು ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ಇದೇ ಗ್ಯಾಂಗ್ ತಿಂಗಳ ಹಿಂದೆ ಜೈನ್ ಮಂದಿರದಲ್ಲಿ ದರೋಡೆ ಮಾಡಿತ್ತು. ಮತ್ತೆ ಹುಬ್ಬಳ್ಳಿಗೆ ಬಂದಿದ್ದ ದರೋಡೆ ಗ್ಯಾಂಗ್ ತಡರಾತ್ರಿ ಪೊಲೀಸರ ಗಸ್ತು ವೇಳೆ ಸಿಕ್ಕಿಬಿದ್ದಿದ್ದರು. ಬಂಧಿಸಲು ಮುಂದಾದ ಪೊಲೀಸ್ ಮೇಲೆ‌ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದ್ದು, ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *