Breaking News

ಒಂದು ವೇಳೆ ಚೀನ ಜತೆಗೆ ಯುದ್ಧ ನಡೆದರೆ ಗೆಲ್ಲುವುದು ನಾವೇ


ನವದೆಹಲಿ: “ಒಂದು ವೇಳೆ ಚೀನ ಜತೆಗೆ ಯುದ್ಧ ನಡೆದರೆ ಗೆಲ್ಲುವುದು ನಾವೇ’. ಗಡಿ ಪ್ರದೇಶದಿಂದ ಸೇನೆಯನ್ನು ಆಂಶಿಕವಾಗಿ ವಾಪಸ್‌ ಪಡೆಯಲಾಗಿದ್ದರೂ, ಆ ದೇಶದಿಂದ ಎದುರಾಗಲಿರುವ ಭೀತಿ ಏನೇನೂ ಕಡಿಮೆಯಾಗಿಲ್ಲ
ಎಂದು  ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಹೇಳಿದರು.

ಬುಧವಾರ ಮಾತನಾಡಿದ ಅವರು, ಯುದ್ಧ ಎನ್ನುವುದು ಕೊನೆಯ ಆಯ್ಕೆಯಾಗಿರಲಿದೆ ಎಂದೂ ಹೇಳಿದ್ದಾರೆ.  ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಎದುರಾಗಿರುವ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಾಗುತ್ತದೆ.

“ಅತ್ಯಂತ ಗರಿಷ್ಠ ಪ್ರಮಾಣದ ಎಚ್ಚರಿಕೆಯನ್ನು ಸೇನೆ ಕಾಪಾಡಿಕೊಂಡು ಬರುತ್ತಿದೆ. ಇದರ ಜತೆಗೆ ಚೀನಾ ಸೇನೆಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಸಂಧಾನದ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಗಳೂ ನಡೆದಿವೆ. ಒಂದು ವೇಳೆ ಚೀನಾ ಜತೆಗೆ ಯುದ್ಧ ಏರ್ಪಟ್ಟರೆ, ಅದರಲ್ಲಿ ನಮ್ಮ ಸೇನೆಯೇ ಗೆಲ್ಲಲಿದೆ’ ಎಂದು ಹೇಳಿದ್ದಾರೆ.

Share News

About admin

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *