Breaking News

ಮೇಕೆದಾಟು ಯೋಜನೆಗೆ ಪಾದಯಾತ್ರೆ : ರಸ್ತೆ ಮಧ್ಯೆ ಯೇ ಹೈಡ್ರಾಮಾ



ರಾಮನಗರ: ಮೇಕೆದಾಟು ಯೋಜನೆಗೆ ಪಾದಯಾತ್ರೆ ಇದೀಗ 4 ದಿನ ಸಂಪೂರ್ಣವಾಗಿ ಮುಗಿಸಿ 5 ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯನ್ನು ತಡೆಯಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸಿದೆ.  ಪಾದಯಾತ್ರೆಗೆ ಹೋರಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಮದ್ದೂರಿನ ನಿಡಘಟ್ಟ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ.  ಪೊಲೀಸರು ಹಾಗೂ ಕೈ ಕಾರ್ಯಕರ್ತರ ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ.

ಪಾದಯಾತ್ರೆಗೆ ತೆರಳಲು ಅವಕಾಶವಿಲ್ಲ. ವಾಹನಗಳನ್ನು ಪಕ್ಕಕ್ಕೆ ಹಾಕುವಂತೆ ಶ್ರೀರಂಗಪಟ್ಟಣದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಅವರನ್ನು ತಡೆದಿದ್ದಾರೆ. ರಸ್ತೆ ಮಧ್ಯೆಯೇ ಹೈಡ್ರಾಮಾ ಆರಂಭವಾಗಿದೆ.

ಕಾರ್ಯಕರ್ತರ ಪಟ್ಟಿಗೆ ಮಣಿದ ಪೊಲೀಸರು ವಿಧಿಯಿಲ್ಲದೇ ಕಾರ್ಯಕರ್ತರನ್ನು ಬಿಟ್ಟುಕಳುಹಿಸಿದ್ದಾರೆ. ಇನ್ನೊಂದೆಡೆ ಪಾದಯಾತ್ರೆ ತೆರಳುತ್ತಿದ್ದ ಕಾರ್ಯಕರ್ತರನ್ನು ಕಾಗೇಪುರ ಗೇಟ್ ಬಳಿ ಪೊಲೀಸರು ತಡೆದು ವಾಪಸ್ ಕಳುಹಿಸದ ಘಟನೆ ನಡೆದಿದೆ.

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *