Breaking News
Featured Video Play Icon

ಸರ್ಕಾರದ ಎಡವಟ್ಟು ರಸ್ತೆ ಇಲ್ಲದಿದ್ದರೂ ಇದೆ ಎಂದು ಸರ್ಕಾರ ಸುಳ್ಳು ಹೇಳಿದೆ- ನಂದಿಕಟ್ಟಾ ಗ್ರಾಮಸ್ಥರ ಆರೋಪ..?

ಮುಂಡಗೋಡ ಗ್ರಾಮೀಣ ಜನರಿಗೆ ಉಪಯೋಗ ಆಗುವ ಉದ್ದೇಶದಿಂದ ಸರ್ಕಾರ ಈ ಗ್ರಾಮಕ್ಕೆ ಪೆಟ್ರೋಲ್ ಬಂಕ್ ಮಂಜೂರು ಮಾಡಿದೆ‌.ಆದ್ರೆ ಇದೀಗ ಸರ್ಕಾರ ನಿಗಿದ ಪಡಿಸಿದ ಸ್ಥಳ ಬಿಟ್ಟು ಬೇರೆಡೆ ಬಂಕ್ ನಿರ್ಮಿಸಲು ತಯಾರಿ ನೆಡೆಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಕ್ಕೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನತೆಗೆ ರೈತರಿಗೆ ಅನುಕೂಲವಾಗಲೆಂದು ಸರ್ಕಾರದಿಂದ ಪೆಟ್ರೋಲ್ ಬಂಕ್ ಸೌಲಭ್ಯ ಮಂಜೂರು ಮಾಡಿರುವುದು ಖುಷಿಯ ಸಂಗತಿ‌. ಆದ್ರೆ ಸರ್ಕಾರ ನಿಗದಿ ಪಡಿಸಿದ ಗ್ರಾಮದಲ್ಲಿ ಬಿಟ್ಟು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಂಕ್ ನಿರ್ಮಾಣ ಮಾಡುತ್ತಿರುವುದು ವಿಪರ್ಯಾಸವೇ ಸರಿ.ಇತ್ತ ನಂದಿಕಟ್ಟಾ ಹಾಗೂ ಸುತ್ತಲಿನ ಗ್ರಾಮಸ್ಥರು ನಮ್ಮ ಗ್ರಾಮದಲ್ಲೇ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಬೇಕು ಎಂದು ಪಟ್ಟು

ಹಿಡಿದಿದ್ದಾರೆ.ಇನ್ನೂ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಂಕ್ ನಿರ್ಮಾಣಕ್ಕೆ ಅದು ಸೂಕ್ತ‌ ಸ್ಥಳವಲ್ಲ ಹಾಗೂ ಸುತ್ತಲಿನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯಾವುದೇ ರಸ್ತೆಗಳಿಲ್ಲ ಆದರೆ ಸರ್ಕಾರ ಅಲ್ಲಿ ರಸ್ತೆ ಇದೆ ಅಂತಾ ಸುಳ್ಳು ಹೇಳಿದೆ.ಕೇವಲ ಅಲ್ಲಿ ಕಾಲು ದಾರಿ ಮಾತ್ರ‌ ಇದ್ದು ಕೇವಲ ಮನುಷ್ಯರು ಮಾತ್ರ ಓಡಾಡುವ ಅನುಕೂಲವಿದೆ ಎಂದು‌ ಆರೋಪಿಸಿದ್ರು.

ಇನ್ನೂ‌ ಗ್ರಾಮಸ್ಥರಾದ‌ ಗಣೇಶ ಕಮ್ಮಾರ ಮಾತನಾಡಿ ಸರ್ಕಾರದಿಂದ ನಮ್ಮ‌ಊರಿಗೆ ಬಂದಿರುವ ಪೆಟ್ರೋಲ್ ಬಂಕ್ ನಮ್ಮ‌ಊರಲ್ಲೇ ಆಗಬೇಕು ಅದು ಬಿಟ್ಟು ಬೇರೆ ಕಡೆ ನಿರ್ಮಾಣ ಮಾಡಿದ್ರೆ‌ ಅದು ಜನರಿಗೆ ಆಗಲಿ ರೈತರಿಗೆ ಉಪಯೋಗ ಆಗುವುದಿಲ್ಲ. ಅಲ್ಲಿ ರಸ್ತೆನೇ ಇಲ್ಲಾ ಆದ್ರೂ‌ ಸರ್ಕಾರ ರಸ್ತೆ ಇದೆ‌ ಅಂತಾ ಹೇಳಿದೆ. ಒಂದ ವೇಳೆ ಅಲ್ಲಿ ರಸ್ತೆ‌ ಇದ್ದಿದ್ದೇ ಆದ್ರೆ ಸಂಭಂದಿಸಿದ ಅಧಿಕಾರಿಗಳು ಬಂದು ಕೂಡಲೇ ಪರಿಶೀಲನೆ ಮಾಡಬೇಕು,ಇಲ್ಲವಾದಲ್ಲಿ ಮುಂದೇ ಗ್ರಾಮಸ್ಥರು ಕೂಡಿ ಪ್ರತಿಭಟನೆ ನೆಡಸಲಾಗುವುದು ಎಂದರು‌.

ಇನ್ನೂ ಸರ್ಕಾರದ ಈ ಎಡವಟ್ಟು ಕೆಲಸದಿಂದ‌ ರೈತರಿಗೆ ,ಹಾಗೂ ಗ್ರಾಮಸ್ಥರಿಗೆ ಅಷ್ಟೇ ಅಲ್ಲದೆ ಈಗಾಗಲೇ ಇದೇ ಸರ್ವೇಯಲ್ಲಿ ಬರುವ ಸ್ಥಳದಲ್ಲಿ HP ಪೆಟ್ರೋಲ್ ಬಂಕ್ ಕಾಮಗಾರಿ ಪ್ರಾರಂಭವಾಗುತ್ತಿದ್ದು, ಆ ಬಂಕ್ ಮಾಲಿಕರಿಗೂ‌ ಕೂಡ ಭಾರಿ ಹೊಡೆತ ಬೀಳಲಿದೆ. ಇಷ್ಟಾಗಿಯೂ ಕೂಡ ಸ್ಥಳಕ್ಕೆ ಸಂಭಂದಿಸಿದ ಯಾವೊಬ್ಬ ಅಧಿಕಾರಿಯೂ ಕೂಡ ಭೇಟಿ ನೀಡಿ ಪರಿಶೀಲನೆ ನೆಡೆಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರದಿಂದ ಬಂದ ಈ ಸೌಲಭ್ಯವೂ ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗುವಂತೆ ನಂದಿಕಟ್ಟಾ ಗ್ರಾಮಕ್ಕೆ ಮಾತ್ರ‌ ಸೀಮತವಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನಾದರೂ‌ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸ್ತಾರಾ ಕಾದು ನೋಡಬೇಕಿದೆ.

Share News

About admin

Check Also

ಬೆಳಗಾವಿ ದಮೋನೆ ಫ್ಯಾಮಿಲಿ ದುರಂತದ ಟ್ವಿಸ್ಟ್: 6 ಜನರ ಸಾವಿಗೆ ಫ್ರಿಡ್ಜ್ ಬ್ಲಾಸ್ಟ್ ಕಾರಣವಲ್ಲ, CCTV ವಿಡಿಯೋ ಸಂದೇಹ!

ಬೆಳಗಾವಿ: ಚವಾಟ್‌ಗಲ್ಲಿಯಲ್ಲಿ ಸೆ.16ರಂದು ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಅಗ್ನಿ ದುರಂತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಗೂ …

Leave a Reply

Your email address will not be published. Required fields are marked *