Breaking News

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. ಕಡಿಮೆ ಬೆಲೆಗೆ ಔಷಧ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ. ಎಸ್‌ಐಟಿ ದಾಳಿಯಲ್ಲಿ ಕೃಪಾ ಫಾರ್ಮಸಿಯಲ್ಲಿ ಅಪಾರ ಪ್ರಮಾಣದ ನಕಲಿ ಔಷಧಿಗಳು ಹಾಗೂ ಬಿಲ್‌ಗಳು ಪತ್ತೆಯಾಗಿದ್ದು, ಮಾಲೀಕ ವೀರೇಶ್‌ಕುಮಾರ್‌ನನ್ನು ಬಂಧಿಸಲಾಗಿದೆ. ಆತನ ಮಾಹಿತಿ ಆಧರಿಸಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆಯಿದೆ. ಮತ್ತೊಬ್ಬ ಆರೋಪಿ ಪ್ರಶಾಂತ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನನ್ನು ಭಾರತಕ್ಕೆ ಕರೆತರಲು ಎಸ್‌ಐಟಿ ಪ್ರಯತ್ನಿಸುತ್ತಿದೆ. ಈ ಹಿಂದೆ ಸಿ.ಕೆ.ಪಾಳ್ಯದ ತೋಟದ ಮನೆಯಲ್ಲಿ ₹5 ಕೋಟಿ ಮೌಲ್ಯದ ನಕಲಿ ಔಷಧಿ ಪತ್ತೆಯಾಗಿತ್ತು.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *