Breaking News

ಕೊರೋನಾ ಕುರಿತು ಸಿಎಂಗೆ ಪತ್ರ ಬರೆದ ವೃದ್ಯ

ಬೆಂಗಳೂರು: ರೂಪಾಂತರಿ ಮೂರನೇ ಅಲೆಯಲ್ಲಿ ರೋಗಿಗಳಿಗೆ ಉಸಿರಾಟದ ತೊಂದರೆ ಕಂಡು ಬರ್ತಿಲ್ಲ, ಸೋಂಕಿತರಲ್ಲಿ ಶೀತ, ಜ್ವರ ಬಿಟ್ಟರೆ ಬೇರೆ ಲಕ್ಷಣಗಳೇ ಇಲ್ಲ.  ಬಲವಂತದ ಕೊರೊನಾ ಪರೀಕ್ಷೆ ನಿಲ್ಲಿಸಿ ಎಂದು ಮೂಡಲಪಾಳ್ಯದ ಸಾಗರ್ ಕ್ಲಿನಿಕ್ ನ ಡಾ. ರಾಜು ಎಂಬುವವರು ಸಿಎಂ ಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಲವಂತದ ಕೊರೊನಾ ಪರೀಕ್ಷೆಗಳು ನಡೆಯುತ್ತಿದ್ದು, ಕಡ್ಡಾಯ ಕೊರೊನಾ ಪರೀಕ್ಷೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ.

ಈಗಿರುವಂತಹ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಯಲ್ಲಿ ಅವೈಜ್ಞಾನಿಕ ಟೆಸ್ಟ್ ಗಳು ನಡೆಯುತ್ತಿದ್ದು, ಯಾವುದೇ ರೋಗ ಲಕ್ಷಣ ಇಲ್ಲದವರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಬಲವಂತದ ಕೊರೊನಾ ಟೆಸ್ಟ್ ಗಳಿಂದ ರಾಜ್ಯದ ಆರ್ಥಿಕತೆ ಜೊತೆಗೆ, ಜನರ ನೆಮ್ಮದಿ ಹಾಳಾಗುತ್ತಿದೆ. ಈ ಹಿನ್ನೆಲೆ ಕಡ್ಡಾಯ ಕೊರೊನಾ ಪರೀಕ್ಷೆ ರದ್ದುಗೊಳಿಸಿ, ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಡಾಕ್ಟರ್ ರಾಜು ಸಿಎಂ ಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *