Breaking News

ಜಿಲ್ಲಾಡಳಿತ ಯಡವಟ್ಟು : ಮುಂದುವರೆದ ವೀಕೆಂಡ್ ಕರ್ಫ್ಯೂ



ಮಂಡ್ಯ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತದ ಯಡವಟ್ಟು ಮಾಡಿದ್ದು ಸರ್ಕಾರಕ್ಕೂ ಮೊದಲೇ ವೀಕೆಂಡ್ ಕರ್ಫ್ಯೂ ವಿಸ್ತರಣೆ ಮಾಡಿದೆ.

ಜ.31ರವರೆಗೆ ವೀಕೆಂಡ್ ಕರ್ಫ್ಯೂ ವಿಸ್ತರಣೆ ಮಾಡಿ ಮಂಡ್ಯ ಡಿಸಿ ಆದೇಶಿಸಿದ್ದರು. ಹೀಗಾಗಿ ಮಂಡ್ಯದಲ್ಲಿ ಕರ್ಫ್ಯೂ ಮುಂದುವರಿಯುತ್ತಾ? ರದ್ದಾಗುತ್ತಾ? ಗೊಂದಲದಲ್ಲಿ ಮಂಡ್ಯ ಜನರು, ವ್ಯಾಪಾರಸ್ಥರು ಇದ್ದಾರೆ.

ಆದರೆ ಮಂಡ್ಯ ಜಿಲ್ಲಾಡಳಿತ ವೀಕೆಂಡ್ ಕರ್ಫ್ಯೂ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸರ್ಕಾರ ರದ್ದು ಮಾಡಿದರೂ, ಮಂಡ್ಯದಲ್ಲಿ ಕರ್ಫ್ಯೂ ಮುಂದುವರೆದಿದೆ. ಇಡೀ ರಾಜ್ಯಕ್ಕೆ ಒಂದು ಕಾನೂನು, ಮಂಡ್ಯಕ್ಕೆ ಮತ್ತೊಂದು ಕಾನೂನು..? ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತದ ಯಡವಟ್ಟಿಗೆ ಮಂಡ್ಯ ಜನ ಗೊಂದಲಕ್ಕೀಡಾಗಿದ್ದಾರೆ.

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *