ಮಂಡ್ಯ: ಲೋ ಬಿಪಿಯಿಂದ ಮನೆಯಲ್ಲೇ ಮಗ ಕುಶ ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿ ಕೇಳಿದ ಐದೇ ನಿಮಿಷದಲ್ಲಿ ತಾಯಿ ಲಕ್ಷ್ಮಮ್ಮ ಕೂಡ ಕೊನೆಯುಸಿರೆಳೆದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನಹೊಸಹಳ್ಳಿಕೊಪ್ಪಲು ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಲಕ್ಷ್ಮಮ್ಮ (70), ಕುಶ (43) ವಿಧಿ ಆಟಕ್ಕೆ ಬಲಿಯಾದ
ತಾಯಿ ಮಗ. ಮೃತ ಕುಶ ಅವರು ಬೆಂಗಳೂರಿನಲ್ಲಿ ಸ್ವಂತ ಸ್ಟುಡಿಯೋ ಇಟ್ಟುಕೊಂಡಿದ್ದರು. ಅನಾರೋಗ್ಯದಿಂದಾಗಿ 4 ತಿಂಗಳ ಹಿಂದೆ ಊರಿಗೆ ವಾಪಸ್ಸಾಗಿದ್ದರು. ತಾಯಿ, ಮಗನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಶಾಸಕ ಸುರೇಶ್ ಗೌಡ ಮೃತರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

