Breaking News

ಕ್ಯಾಂಟರ್‌ಗೆ ದ್ವಿಚಕ್ರವಾಹನ ಡಿಕ್ಕಿ : ಇಬ್ಬರು ಸಾವು

ಬೆಂಗಳೂರು: ಕ್ಯಾಂಟರ್‌ಗೆ ಹಿಂದಿನಿಂದ ದ್ವಿಚಕ್ರವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದ,  ಚಲಿಸುತಿದ್ದ ಕ್ಯಾಂಟರ್ ಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ ಹೊಡೆದು ಘಟನೆ ನಗರದ ಕಂಠೀರವ ಸ್ಟುಡಿಯೋ ಬಳಿ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ.

ರಾಜ್ ಕುಮಾರ್ ಸಮಾದಿ ಬಳಿಯ ರಸ್ತೆಯಲ್ಲಿ ತಡರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಲಗ್ಗೇರೆ ಕಡೆಯಿಂದ ಗೊರಗುಂಟೆ ಪಾಳ್ಯ ಕಡೆಗೆ ತೆರಳುತಿದ್ದಾಗ ಅಪಘಾತ ನಡೆದಿದೆ. ಬಾಡಿಗೆ ಸ್ಕೂಟರ್ ಬುಕ್ ಮಾಡಿಕೊಂಡು ಸ್ಕೂಟರ್ ನಲ್ಲಿ ತೆರಳುತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅಸ್ಸಾಂ ಮೂಲದ ಕುಮಾರ್ ಲಿಂಬೂ ಮತ್ತು ಸುನಿಲ್ ಸ್ಕೂಟರ್ ನಲ್ಲಿ ತೆರಳುತಿದ್ದವರು. ಅಪಘಾತದಲ್ಲಿ ಕುಮಾರ್ ಲಿಂಬು ಸ್ಥಳದಲ್ಲೇ ಮೃತಪಟ್ಟಿದ್ದು ಸುನಿಲ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಸಹ ಮೃತಪಟ್ಟಿದ್ದಾರೆ.

ಮಂದಗತಿಯಲ್ಲಿ ಸಾಗುತಿದ್ದ ಲೋಡೆಡ್ ಕ್ಯಾಂಟರ್ಗೆ ವೇಗವಾಗಿ ಹಿಂದಿನಿಂದ ಬಂದು ಸ್ಕೂಟರ್ ಡಿಕ್ಕಿ ಹೊಡೆದಿದೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕ್ಯಾಂಟರ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *