ಬೆಂಗಳೂರು: ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಸದ್ದಿನ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 28 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ 24-01-2022ರ ಟಿಪ್ಪಣಿಯಂತೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶಿಸಿರೋದಾಗಿ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಎಂ ಕಾರಜೋಳ – ಬೆಳಗಾವಿ
ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
ಬಿ ಶ್ರೀರಾಮುಲು – ಬಳ್ಳಾರಿ
ವಿ.ಸೋಮಣ್ಣ – ಚಾಮರಾಜನಗರ
ಉಮೇಶ್ ಕತ್ತಿ – ವಿಜಯಪುರ
ಎಸ್ ಅಂಗಾರ – ಉಡುಪಿ
ಅರಗ ಜ್ಞಾನೇಂದ್ರ – ತುಮಕೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ
ಸಿ.ಸಿ.ಪಾಟೀಲ್ – ಬಾಗಲಕೋಟೆ
ಆನಂದ್ ಸಿಂಗ್ – ಕೊಪ್ಪಳ
ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
ಪ್ರಭು ಚೌವ್ಹಾಣ್ – ಯಾದಗಿರಿ
ಮುರುಗೇಶ್ ನಿರಾಣಿ – ಕಲಬುರ್ಗಿ
ಶಿವರಾಂ ಹೆಬ್ಬಾರ್ – ಹಾವೇರಿ
ಎಸ್ ಟಿ ಸೋಮಶೇಖರ್ – ಮೈಸೂರು
ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ
ಬಿ.ಎ.ಬಸವರಾಜ್ – ದಾವಣಗೆರೆ
ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗಾರಾಜ್ – ಚಿಕ್ಕಬಳ್ಳಾಪುರ
ಕೆ ಸಿ ನಾರಾಯಣಗೌಡ – ಶಿವಮೊಗ್ಗ
ಬಿ.ಸಿ.ನಾಗೇಶ್ – ಕೊಡಗು
ವಿ.ಸುನೀಲ್ ಕುಮಾರ್ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ್ – ಧಾರವಾಡ
ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
ಮುನಿರತ್ನ – ಕೋಲಾರ
bigtvnews | Hubli Dharwad News | Kannada News | Karnataka News Hubli News | News In Hubli | Local news

