Breaking News

ಟೋಲ್ ಕಲೆಕ್ಟ್ ಮಾಡುವುದನ್ನು ಮೋದಲು ಬಿಡಿ : ಪಿ.ಎಚ್.ನೀರಲಕೇರಿ


ಹುಬ್ಬಳ್ಳಿ : ಹೋಸಪೇಟೆವರೆಗೂ ಇನ್ನು ರಾಷ್ಟ್ರೀಯ ಹೆದ್ದಾರಿ ಮಾಡುವ ಕಾರ್ಯವೆ ಮುಗಿದಿಲ್ಲ ಟೋಲ್ ಕಲೆಕ್ಟ್ ಮಾಡುವುದು ನಿಯಮಗಳಿಗೆ ವಿರುದ್ದವಾಗಿದ್ದು ಎಂದು ಕೆ.ಪಿ.ಸಿ.ಸಿ ಮಾದ್ಯಾಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿದರು..
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೆದ್ದಾರಿ ರಸ್ತೆ ಪಕ್ಕದಲ್ಲಿ ಉದ್ದಕ್ಕೂ ಹಳ್ಳಿಗಳಿಗೆ ಹೋಗಲು ಯಾವುದೆ ಸರ್ವಿಸ್ ರಸ್ತೆಯನ್ನ ನಿರ್ಮಾಣ ಮಾಡಿಲ್ಲ ಇಗಾಗಲೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಇದರಿಂದ ಟೋಲ್ ಗೇಟ್ ಗೆ ಹತ್ತಿರವಿರುವ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಜನರಿಗೆ ತುಂಬ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಹೆದ್ದಾರಿ ರಸ್ತೆ ನಿರ್ಮಾಣವು ಕಳಪೆ ಕಾಮಗಾರಿಯಾಗಿದೆ ಕನಿಷ್ಠ ಮೂವತ್ತು ವರ್ಷವಾದರು ರಸ್ತೆ ಉಪಯೋಗಕ್ಕೆ ಬರಬೇಕು ಇಗಾಗಲೆ ರಸ್ತೆಯಲ್ಲಿ ಬಿರುಕು ಕಾಣಿಸಿಕೋಳ್ಳುತ್ತಿವೆ ಎಂದು ಹರಿಹಾದರು.
ಈ ಕೂಡಲೆ ಟೋಲ್ ಹಣ ಸಂಗ್ರಹಣೆಯನ್ನು ಬಿಡಬೇಕು ಮತ್ತು ರಸ್ತೆ ಕಾಮಗಾರಿ ಕೆಲಸ ಪೂರ್ತಿಯಾಗಿ ಮುಗಿದಮೇಲೆ ಎರಡು ತಿಂಗಳು ಮುಂಚೆಯೆ ತಿಳಿಸಿ, ನಂತರ ಟೋಲ್ ಸಂಗ್ರಹ ಮಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರಸ್ ವಿದ್ಯಾನಗರ ಬ್ಲಾಕ್ ಅದ್ಯಕ್ಷ ರಜತ ಉಳ್ಳಾಗಡ್ಡಿಮಠ ಮತ್ತು ಇನ್ನಿತರರು ಉಪಸ್ಥಿತರಿದ್ದರು.

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *