ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ನಾಳೆಗೆ(ಜ.28) ಆರು ತಿಂಗಳು. ಅದೇ ದಿನ ಸಿಎಂ ಬರ್ತ್ ಡೇ ಕೂಡ. ಅಂದು 62ನೇ ವಸಂತಕ್ಕೆ ಬಸವರಾಜ ಬೊಮ್ಮಾಯಿ ಕಾಲಿಡಲಿದ್ದಾರೆ.
ಆರ್ಟಿ ನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಯಾವತ್ತೂ ಜನ್ಮ ದಿನ ಆಚರಿಸಿಕೊಂಡಿಲ್ಲ, ನಾಳೆಯೂ ಆಚರಿಸಿಕೊಳ್ಳುವುದಿಲ್ಲ. ಪದಗ್ರಹಣ ಮಾಡಿ ನಾಳೆಗೆ ಆರು ತಿಂಗಳ ಪೂರೈಸಲಿರುವ ಕಾರಣಕ್ಕೆ ಅಚ್ಚರಿ, ಮಹತ್ವದ ಘೋಷಣೆಗಳನ್ನು ಮಾಡುವುದಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

