ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುದ್ದಿನ ಮೊಮ್ಮಗಳ ಪಾರ್ಥಿವ ಶರೀರ ಕಂಡು ಈ ವೇಳೆ ಯಡಿಯೂರಪ್ಪ ಮೊಮ್ಮಗಳ ಹಣೆ ಮುಟ್ಟಿ
ಕಣ್ಣೀರು ಹಾಕಿದ್ದಾರೆ.
ಡಾ. ಸೌಂದರ್ಯ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶಿವಗಂಗೆಯ ಹೊನ್ನಮ್ಮಗವಿಮಠದ ರುದ್ರಮುನಿ ಶ್ರೀಗಳ ನೇತೃತ್ವದಲ್ಲಿ ವಿಧಿವಿಧಾನಗಳು ನಡೆಯುತ್ತಿವೆ.
ಜೊತೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ ಡಾ. ಸೌಂದರ್ಯ ತಾಯಿ ಪದ್ಮಾ ಹಾಗೂ ತಂದೆ ವಿರೂಪಾಕ್ಷಪ್ಪ ಮರಡಿ ಮಗಳ ಪಾರ್ಥಿವ ಶರೀರ ಹಿಡಿದು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

