Breaking News

ಫೆ.2 ಕ್ಕೆ ಹೂಲಿ ಪ್ರಕಾಶನ ವತಿಯಿಂದ ಪುಸ್ತಕಗಳ ಬಿಡುಗಡೆ ಸಮಾರಂಭ

ಹುಬ್ಬಳ್ಳಿ: ಶ್ರೀ ಶರಣ ಮಡಿವಾಳಪ್ಪ ಹೂಲಿ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಹಾಗೂ ಹೂಲಿ ಪ್ರಕಾಶನದ‌ ಸಂಯುಕ್ತ ಆಶ್ರಯದಲ್ಲಿ ದಿ.ಶ್ರೀ ಹುಚ್ಚೇಶ್ವರ ಮೇದಿ ಅವರ ಪರಿಕ್ಷಿತ ಹೂಲಿ ಮಡಿವಾಳಪ್ಪನವರ ಚರಿತ್ರೆ ಮತ್ತು ವೀರಣ್ಣ ಹೂಲಿ ಅವರ ಹೂದೊಟದ ಬೆಳದಿಂಗಳು ಕವನ‌ ಸಂಕಲನ ಬಿಡುಗಡೆ ಕಾರ್ಯಕ್ರಮ ಫೆ.2 ರಂದು ಸಂಜೆ 4 ಗಂಟೆಗೆ ಮೂರುಸಾವಿರಮಠ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ವೀರಣ್ಣ ಹೂಲಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು‌ ರುದ್ರಾಕ್ಷಿ ಮಠದ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಆರ್. ಅಂಗಡಿ, ನವಿಲೆ ದೇವಸ್ಥಾನದ ಜಿಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಲೆಕ್ಕ ಪರಿಶೋಧಕರಾದ ಸುರೇಶ ಚೆನ್ನಿ, ಬಣಗಾರ ಸಮಾಜದ ಅಧ್ಯಕ್ಷರಾದ ಅನಿಲ ಕವಿಶೆಟ್ಟಿ, ಉತ್ತರ ಕರ್ನಾಟಕ ಜ್ಯುವೇಲರ್ ಸಂಘಗಳ ಮಹಾಸಭಾದ ಅಧ್ಯಕ್ಷರಾದ ಗೋವಿಂದ ಆರ್. ನಿರಂಜನ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಷಣ್ಮುಖ ಎಂ. ಹೂಲಿ ವಹಿಸಿಲಿದ್ದಾರೆ ಎಂದು ತಿಳಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಮಹಾನೀಯರನ್ನು ಸನ್ಮಾನಿಸಲಾಗುವುದು. ಅಲ್ಲದೇ ಸಾಹಿತಿಗಳಾದ ಮಹಾಂತಪ್ಪ ನಂದೂರ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪ್ರೋ. ಕೆ. ಎಸ್. ಕೌಜಲಗಿ ಗ್ರಂಥಗಳ ವಿಮರ್ಶೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಗ್ರಂಥಪಾಲಕ ಡಾ. ಬಿ. ಎಸ್. ಮಾಳವಾಡ, ಬಸವರಾಜ ಹೂಲಿ, ಮಹೇಶ ಹೂಲಿ, ಪ್ರವೀಣ ಹೂಲಿ, ಭಾಗ್ಯ ಶ್ರೀ ಹೂಲಿ, ಬಸವರಾಜ ಹೂಲಿ, ವೀರಭದ್ರಪ್ಪ ಹೂಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *