ನಗರದ ಕೆಂಪು ಕೋಟೆ ಸಮೀಪವಿರುವ ಲಾ ಕಿಲ್ಲಾ ಮೆಟ್ರೊ ನಿಲ್ದಾಣದ ಬಳಿಯ ಶುಭಾಷ್ ಮಾರ್ಗ್ ಸಿಗ್ನಲ್ನಲ್ಲಿ ನಿನ್ನೆ ( ನವೆಂಬರ್ 10 ) ಸಂಜೆ ಭೀಕರ ನಿಗೂಢ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.ಈ ಭೀಕರ ಸ್ಪೋಟದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಎಲೆಕ್ಟ್ರಾನಿಕ್ ಆಟೊ ರಿಕ್ಷಾ ಸೇರಿದಂತೆ ಒಟ್ಟು 22 ವಾಹನಗಳು ಬೆಂಕಿಗಾಹುತಿಯಾಗಿವೆ.ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಡೆಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಹಾಗೂ ತನಿಖೆಯನ್ನು ನಡೆಸಿವೆ. ಈ ಸಂಬಂಧ ಪೊಲೀಸರಿಗೆ ಹ್ಯೂಂಡೈ ಐ20 ಕಾರಿನಲ್ಲಿ ಸ್ಪೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಕಾರು ಹರಿಯಾಣದ ನೋಂದಣಿ ಸಂಖ್ಯೆಯನ್ನು ಹೊಂದಿತ್ತು ಎಂದು ತಿಳಿದುಬಂದಿದೆ. ಈ ನಂಬರ್ ಪ್ಲೇಟ್ನ ಆಧಾರದ ಮೇಲೆ ಪೊಲೀಸರು ಕಾರಿನ ಮಾಲೀಕನನ್ನು ಬಂಧಿಸಿದ್ದಾರೆ. ಮೊಹಮ್ಮದ್ ಸಲ್ಮಾನ್ ಎಂಬಾತನ ಹೆಸರಿನಲ್ಲಿ ಈ ನಂಬರ್ ಪ್ಲೇಟ್ ಇದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಆತ ಆ ಕಾರನ್ನು ಈ ಹಿಂದೆಯೇ ತಾನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ನದೀಮ್ ಖಾನ್ ಎಂಬಾತನಿಗೆ ಕಾರು ಮಾರಾಟ ಮಾಡಿರುವುದಾಗಿ ಮೊಹಮ್ಮದ್ ಸಲ್ಮಾನ್ ತಿಳಿಸಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

