Breaking News

ರಂಗಕಲೆಯೂ ಸಾಂಸ್ಕೃತಿಕ ವಲಯದಲ್ಲಿ ತನ್ನದೆ ಚಾಪು ಮೂಡಿಸುತ್ತಿದೆ : ರಮೇಶ ಪರವಿನಾಯ್ಕರ

ಕಲಘಟಗಿ : ರಂಗಾಯಣವು ಕಾಲೇಜು ಯುವಕರಲ್ಲಿ ರಂಗಕಲೆ ಆಸಕ್ತಿ ಮೂಡಿಸಲು ಇಂತಹ ತರಬೇತಿಗಳನ್ನು ಸಂಘಟಿಸಲಾಗಿದೆ. ಇದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ವೇದಿಕೆಯ ಬಯ ತೊಡೆದುಹಾಕಲು ಅನುಕೂಲವಾಗುತ್ತದೆ ಮತ್ತು ರಂಗಾಯಣವು ಪ್ರತಿವಾರ ವಾರಾಂತ್ಯ ನಾಟಕಗಳನ್ನು ಆಯೋಜಿಸಿ ಕಲೆ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ತನ್ನದೆ ಚಾಪು ಮೂಡಿಸುತ್ತಿದೆ ಎಂದು ರಂಗಾಯಣ ನಿರ್ದೇಶಕರಾದ ರಮೇಶ ಪರವಿನಾಯ್ಕರ ಮಾತನಾಡಿದರು.

ಕಲಘಟಗಿಯ ಗುಡ್ ನ್ಯೂಜ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರಕಾರದ ರಂಗಾಯಣ ಧಾರವಾಡ ಆಯೋಜಿಸಿದ ಯುವರಂಗ ತರಬೇತಿ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಲ್ಲಿ ಅಡಗಿರುವ ಸೂಪ್ತ ಕಲೆಯನ್ನು ಹೊರ ತೆಗೆಯಲು ರಂಗಾಹಣವು ಗ್ರಾಮೀಣ ಪ್ರದೇಶದ ಕಾಲೇಜುಗಳಿಗೆ ಅವಕಾಶ ನೀಡಿರುತ್ತದೆ. ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಕಲಾವಿದರಾಗಿರಿ ಎಂದು ಹೇಳಿದರು.

ಸಭೆಯ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ವೈಸ್ ಚೆರಮನ್ ರ ಬ್ರ ನಿಜೂ ಥಾಮಸ್ ಮಾತನಾಡಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ, ತರಬೇತಿ ಶಿಬಿರದ ಸಂಚಾಲಕರಾದ ಡಾ. ಮಹೇಶ ಧ. ಹೊರಕೇರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿ ಆರ್ ಬೆಟಗಾರ ಅವರು ವಂದಿಸಿದರು, ಮಹಾದೇವ ಉಳ್ಳಾಗಡ್ಡಿ ನಿರೂಪಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಶ್ರೀಮತಿ. ಶಶಿಕಲಾ ಎನ್, ನಾಟಕೋತ್ಸವದ ಸಂಚಾಲಕರಾದ ಯಮನಪ್ಪ ಜಾಲಗಾರ, ಹಿರಿಯ ಪ್ರಾದ್ಯಾಪಕರಾದ ಪ್ರೊ. ಎ ಟಿ ಬಟ್ಟ, ಪ್ರೊ ಜಿ ಆರ್ ಸೂಳಿಬಾವಿ, ಶ್ರೀಮತಿ ಪಾರ್ವತಿ ಉಳ್ಳಾಗಡ್ಡಿ, ಬಸವರಾಜ ಹುಲಿಕಟ್ಟಿ. ಪ್ರಧಾನ ಕಾರ್ಯದರ್ಶಿ ಮಂಜುನಾಥ ಭೋವಿ ಇದ್ದರು. ನಾಟಕದ ತರಬೇತಿ ಮುಗಿದ ನಂತರ ಕಾಲೇಜಿನಲ್ಲಿ ಪ್ರದರ್ಶನಗೊಳ್ಳುವುದಲ್ಲದೆ ಧಾರವಾಡದ ರಂಗಾಯಣ ಬಯಲು ರಂಗಮಂದಿರದಲ್ಲಿ ಕೂಡ ಪ್ರದರ್ಶನ ನೀಡುತ್ತದೆ.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *