Breaking News

ಪ್ರಧಾನಮಂತ್ರಿಯಿಂದ ನಾಳೆ ಸಮಾನತೆಯ ಪ್ರತಿಮೆ ಉದ್ಘಾಟನೆ

ನವದೆಹಲಿ : ICRISATನ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಮತ್ತು 11ನೇ ಶತಮಾನದ ಭಕ್ತಿ ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಹೈದರಾಬಾದ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ದಕ್ಷಿಣ ಭಾರತದ ಸಮಾಜ ಸುಧಾರಕರಲ್ಲಿ ಅತ್ಯಂತ ಪ್ರಮುಖರೆನಿಸಿದವರು ಶ್ರೀ ರಾಮಾನುಜಾಚಾರ್ಯರು. ವಿಶಿಷ್ಠಾದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶ್ರೀಗಳು, ಭೂಮಿ ಮೇಲೆ ಅವತರಿಸಿ ಸಾವಿರ ವರ್ಷ ಪೂರ್ಣಗೊಂಡಿರುವ ನಿಮಿತ್ತ 216 ಅಡಿ ಎತ್ತರದ ಪ್ರತಿಮೆ ಹೈದರಾಬಾದ್‌ನ ಮುಚಿಂತಲ್​ ಎಂಬಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದ್ದು, ನಾಳೆ ಪಿಎಂ ಮೋದಿ ಉದ್ಘಾಟಿಸಲಿದ್ದಾರೆ.

Share News

About admin

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *