Breaking News

ಕುಟುಂಬ ವ್ಯಾಮೋಹಕ್ಕಿಂತಲೂ ರಾಜ್ಯದ ಮೇಲೆ ಪ್ರೀತಿ ಹೆಚ್ಚು : ಕುಮಾರಸ್ವಾಮಿ


ಬೆಂಗಳೂರು: ಕೆಲ ಹೋರಾಟಗಾರರು ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಾನು ರಾಜಕಾರಣಕ್ಕೆ ಬರದೇ ಇದ್ದಿದ್ದರೆ ಇಂದು ನಮ್ಮ ಪಕ್ಷ ಇರುತ್ತಿರಲಿಲ್ಲ.ಪಕ್ಷ ಉಳಿಸಿಕೊಳ್ಳಲು ನನ್ನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಬೇಕಾಯಿತು. ನನಗೆ ಕುಟುಂಬ ವ್ಯಾಮೋಹಕ್ಕಿಂತಲೂ ರಾಜ್ಯದ ಮೇಲೆ ವ್ಯಾಮೋಹ, ಪ್ರೀತಿ ಹೆಚ್ಚು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮುಂದಿನ ಚುನಾವಣೆಗೆ ಅವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಕ್ಷವನ್ನು ಉಳಿಸಿಕೊಳ್ಳಲು ಕುಟುಂಬದವರು ಕೆಲವರು ರಾಜಕೀಯಕ್ಕೆ ಬಂದಿದ್ದಾರೆ ನಿಜ, ಅದರ ಹೊರತಾಗಿ ಯಾವ ಕಾರ್ಯಕರ್ತರನ್ನೂ ಹರಕೆಯ ಕುರಿ ಮಾಡಿಲ್ಲಎಂದು ಎಚ್‌ಡಿಕೆ ಹೇಳಿದರು.

Share News

About admin

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *