ಮಂಡ್ಯ: ಶಾಸಕ ನಾರಾಯಣಗೌಡರು ಬಿಜೆಪಿ ಆಪರೇಷನ್ ಗೆ ಯಾವುದೇ ಕಾರಣಕ್ಕೂ ತುತ್ತಾಗಿಲ್ಲ ಎಂದು ಜೆಡಿಎಸ್ ಜಿಪಂ ಸದಸ್ಯ ಎಚ್.ಟಿ.ಮಂಜು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಜಾನಕಿರಾಮ್ ಸ್ಪಷ್ಟನೆ ನೀಡಿದರು.ಕೆ.ಆರ್.ಪೇಟೆಯ ಶಾಸಕ ನಾರಾಯಣಗೌಡ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಟಿವಿ ಮಾದ್ಯಮಗಳು ಬಿಜೆಪಿ ಆಪರೇಷನ್ ತುತ್ತಾಗಿದ್ದಾರೆ ಎಂದು ಟಿವಿ ಮಾಧ್ಯಮಗಳು ವದಂತಿ ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು. ಶಾಸಕರೊಂದಿಗೆ ನಾನು ಕೂಡ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದೀನಿ. ಈ ಸಮಯದಲ್ಲಿ ಅವರು, ಮುಂಬೈನಲ್ಲಿ ವ್ಯವಹಾರಿಕವಾಗಿ ಬಂದಿದ್ದೀನಿ. ಬುಧವಾರ ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಆಪರೇಷನ್ ಏನೂ ಇಲ್ಲ. ಸುಮ್ನೆ ವದಂತಿ ಬೇಡ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕಿಕ್ಕೇರಿ ಪ್ರಭಾಕರ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





