Breaking News

ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡಿದ ವ್ಯಕ್ತಿ ಬಂಧನ


ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮೊಬೈಲ್‌ ನಂಬರ್‌ ಸಂಗ್ರಹಿಸಿ ಮೆಸೆಂಜರ್‌ ಹಾಗೂ ವಾಟ್ಸ್‌ಆಯಪ್‌ ಮೂಲಕ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ಹಾಸನ ಮೂಲದ ಆರೋಪಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್‌(32) ಪೋಲಿಸ್ ರು
ಬಂಧಿಸಿದ್ದಾರೆ.

ಜೆಸಿಬಿ ಚಾಲಕನಾಗಿರುವ ಹರೀಶ್‌, ಇತ್ತೀಚೆಗೆ ಬಿಳೆಕಹಳ್ಳಿ ನಿವಾಸಿಯೊಬ್ಬರ ಪತ್ನಿಗೆ ಕಳೆದ ಮೂರು ತಿಂಗಳಿಂದ ಪದೇ ಪದೇ ಕರೆ ಮಾಡುತ್ತಿದ್ದು, ಜತೆಗೆ ವಾಟ್ಸ್‌ಆಯಪ್‌ ಮೂಲಕ ಪೋರ್ನ್ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಮೊಬೈಲ್‌ ನಂಬರ್‌ನ ಸಿಡಿಆರ್‌ ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *