ಹುಬ್ಬಳ್ಳಿ : ಹಾಡು ಹಗಲೇ 40 ದಿನದ ಹಸುಗೂಸು ಮಗುವನ್ನು ಕಳ್ಳತನವಾದ ಘಟನೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಕುಂದಗೋಳದ ನೆಹರೂ ನಗರದ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬುವವರು ಮಗುವನ್ನು ಕಳೆದುಕೊಂಡ ತಾಯಿ. ಕೈಯಲ್ಲಿದ್ದ ಮಗುವನ್ನ ಖದೀಮರು ಕದ್ದೊಯ್ದದಿದ್ದಾರೆ. ಕಳೆದ 10 ರಂದು ಕಿಮ್ಸ್ ಗೆ
ಮಗುವಿನೊಂದಿಗೆ ದಾಖಲಾಗಿದ್ದರು. ಹೆಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ನಿಂದ ಮಗು ಬಳಲುತ್ತಿತ್ತು. ಇತ್ತೀಚೆಗೆ ಜನಿಸಿದ ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಕಿಮ್ಸ್ ಗೆ ಮಗುವಿನ ಪಾಲಕರು ದಾಖಲು ಮಾಡಿದ್ದರು.

ಇಂದು ಮದ್ಯಾಹ್ನ ಏಕಾಏಕಿ ತಾಯಿಯ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದಿರೋದಾಗಿ.ಮಗು ಅಳುತ್ತಿದ್ದರಿಂದ ವಾರ್ಡ್ ನ ಹೊರಗೆ ಬಂದಿದ್ದೆ ಕಪ್ಪಗಿದ್ದ ವ್ಯಕ್ತಿ ಮಗುವನ್ನು ಕಿತ್ತುಕೊಂಡು ಹೋಗಿದ್ದಾನೆ. ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ ಎಂದು ತಾಯಿ ಆರೋಪ ಮಾಡಿದ್ದಾರೆ. ಕಿಮ್ಸ್ ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

