ಬೆಂಗಳೂರು: ರಾಜಕಾರಣದ ಮುಸುಕು ಕಾಂಗ್ರೆಸ್ ಮುಖಂಡರು ಮತ್ತವರ ಪಕ್ಷದ ಮೇಲೆ ಬಿದ್ದಿದ್ದು, ಅವರಿಗೆ ಭವಿಷ್ಯ ಇಲ್ಲ. ಕನಿಷ್ಠ ಪ್ರತಿಪಕ್ಷವಾಗಿಯಾದರೂ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಾಪ್ರಹಾರ ನಡೆಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತ ಪಕ್ಷವಾಗಿ ಕೆಲಸ ಮಾಡಲು ಯೋಗ್ಯರಲ್ಲ ಎಂದು ಕಾಂಗ್ರೆಸ್ ಅನ್ನು 2018ರಲ್ಲಿ ಜನರು ತೀರ್ಮಾನಿಸಿ ತಿರಸ್ಕರಿಸಿದರು. ಕನಿಷ್ಠ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿತ್ತು. ಆದರೆ, ಪ್ರತಿಪಕ್ಷವಾಗಿಯೂ ವಿಫಲವಾಗಿದೆ. ರಾಜಕಾರಣದ(Politics) ಮುಸುಕು ಅವರ ಮತ್ತು ಪಕ್ಷದ ಮೇಲೆ ಬಿದ್ದಿದೆ. ಎಲ್ಲವನ್ನು ರಾಜಕೀಯವಾಗಿ ಮತ್ತು ದ್ವೇಷದಿಂದ ನೋಡುವುದರಿಂದ ಮುಖಂಡರಿಗಾಗಲಿ, ಅವರ ಪಕ್ಷಕ್ಕಾಗಲಿ ರಾಜಕೀಯ ಭವಿಷ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

